ದಮನ್: ಕೇಂದ್ರಾಡಳಿತ ಪ್ರದೇಶವಾದ ದಮನ್‌ನ ವಿಮಾನ ನಿಲ್ದಾಣ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆಯನ್ನು ಹಿಡಿಯುವವರೆಗೂ ಆ ಪ್ರದೇಶದಲ್ಲಿನ ಜನರು ಜಾಗರೂಕರಾಗಿರಲು ಜಿಲ್ಲಾ ಅಧಿಕಾರಿಗಳು ಸೂಚಿಸಿದ್ದಾರೆ.
ದಮನ್‌ನಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದೆ. ಬಹುಶಃ ಚಿರತೆ ಗುಜರಾತ್‌ನ ವಲ್ಸಾದ್ ಜಿಲ್ಲೆಯಿಂದ ಪ್ರವೇಶಿಸಿರಬಹುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಚಿರತೆ ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಇದನ್ನು ಸೆರೆಹಿಡಿಯಲು ವಿಮಾನ ನಿಲ್ದಾಣ ಪ್ರದೇಶದಲ್ಲಿ ಎರಡು ಬೋನುಗಳನ್ನು ಇರಿಸಿದ್ದಾರೆ ಎಂದು ದಮನ್ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಇನ್ನು, ಅರಣ್ಯ ಸಿಬ್ಬಂದಿಗಳು ಅಲರ್ಟ್ ಆಗಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಚಿರತೆ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ದಮನ್ ಡೆಪ್ಯೂಟಿ ಕಲೆಕ್ಟರ್ ಮೋಹಿತ್ ಮಿಶ್ರಾ ಹೇಳಿದ್ದಾರೆ.
ಪತ್ನಿಯ ಅಪೇಕ್ಷೆಯಂತೆ ವಾಕಿಂಗ್, ಸಿನಿಮಾ ನೋಡಲು ರಜೆ ಕೋರಿದ ಪೊಲೀಸ್
ಏತನ್ಮಧ್ಯೆ, ದಮನ್ ಆಡಳಿತವು ನಾಗರಿಕರಿಗೆ ರಾತ್ರಿಯಲ್ಲಿ ಏಕಾಂಗಿಯಾಗಿ ಮನೆಯಿಂದ ಹೊರಗೆ ಹೋಗದಂತೆ ಮತ್ತು ಸಣ್ಣ ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ರಕ್ಷಿಸಲು ಸಲಹೆ ನೀಡಿದೆ. ಜನರು ತಮ್ಮ ಮನೆಯ ಹೊರಗೆ ಅಥವಾ ತೆರೆದ ಟೆರೇಸ್ ಪ್ರದೇಶಗಳಲ್ಲಿ ಮಲಗಬಾರದು. ಪ್ರವಾಸಿಗರು ಮತ್ತು ವಾಕಿಂಗ್ ಮಾಡುವವರು ಚಿರತೆಯನ್ನು ಹಿಡಿಯುವವರೆಗೆ ಒಂಟಿಯಾಗಿರುವ ಮತ್ತು ಪ್ರತ್ಯೇಕವಾದ ಸ್ಥಳಗಳಿಗೆ ಹೋಗದಂತೆ ಸೂಚಿಸಿದೆ.