
ಅಧಿಕಾರಿ ಹಂಚಿಕೊಂಡ ಚಿತ್ರದಲ್ಲಿ ಸಮೋಸಾ, ಬಿಸ್ಕತ್ತು, ಗುಲಾಬ್ ಜಾಮೂನ್ ಮತ್ತು ಕೆಲವು ನಮ್ಕೀನ್ ಅನ್ನು ಒಳಗೊಂಡಿರುವ ಪುಟ್ಟ ತಟ್ಟೆಯು ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಪ್ರಧಾನವಾಗಿತ್ತು ನಮ್ಮಲ್ಲಿ ಯಾರೂ ನಿಜವಾಗಿಯೂ ಆ ಸರಳ ಸಂತೋಷಗಳನ್ನು ಮೀರುವುದಿಲ್ಲ ಅಂತಾ ಅಧಿಕಾರಿ ತಿಳಿಸಿದ್ದಾರೆ.
ಮಧ್ಯಮ ವರ್ಗದ ಮನೆಗಳಲ್ಲಿ, ಈ ಪ್ಲೇಟ್ ಈಗಲೂ ಸಹ ಒಂದು ಅದ್ಭುತವಾದ ತಿಂಡಿಗಾಗಿ ಮಾಡುವುದನ್ನು ಮುಂದುವರೆಸಿದೆ ಎಂದು ಅನೇಕ ಟ್ವಿಟ್ಟರ್ ಬಳಕೆದಾರರು ಸೇರಿಸಿದ್ದಾರೆ.
ಇನ್ನು ಅಂದಿನ ದಿನಗಳಲ್ಲಿ ಉಡುಗೊರೆಗಳು ಸ್ಕೆಚ್ ಪೆನ್, ಬಣ್ಣದ ಪೆನ್ಸಿಲ್, ಪೆನ್ಸಿಲ್ ಬಾಕ್ಸ್ ಮುಂತಾದವುಗಳನ್ನು ಹೊಂದಿತ್ತು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ಟರ್ 80, 90ರ ದಶಕವನ್ನು ಆಗಾಗ್ಗೆ ನೆನಪಿಸುತ್ತದೆ. ಇತ್ತೀಚೆಗಷ್ಟೇ ಮಧ್ಯಮ ವರ್ಗದ ಮನೆಗಳಲ್ಲಿ ಮೊಸಾಯಿಕ್ ನೆಲಹಾಸಿನ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಹಳೆಯ ಮನೆಗಳ ಮೊಸಾಯಿಕ್ ನೆಲದ ಫೋಟೋ ಹಂಚಿಕೊಂಡ ಬಳಕೆದಾರರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.