ಲಕ್ನೋ: ಭೋಜ್ಪುರಿ ಸಿನೆಮಾಗಳ ಖ್ಯಾತ ಗಾಯಕಿ ಶಿಲ್ಪಿ ರಾಜ್ ಅವರು ತಮ್ಮ ಗೆಳೆಯನ ಜತೆಗಿರುವ ಎಂಎಂಎಸ್ ಸೋರಿಕೆಯಾಗಿದ್ದು, ಜನ ವಿಡಿಯೋ ಹಂಚಿಕೊಳ್ಳದಂತೆ ಗಾಯಕಿ ಮನವಿ ಮಾಡಿದ್ದಾರೆ.
ಭೋಜ್ಪುರಿ ನಟಿಯರಾದ ತ್ರಿಶಾಕರ್ ಮಧು ಮತ್ತು ಪ್ರಿಯಾಂಕಾ ಪಂಡಿತ್ ಅವರ ಬಳಿಕ ಶಿಲ್ಪಿ ಅವರಿಗೆ ಈ ಸಂಕಷ್ಟ ಎದುರಾಗಿದೆ. ವಿಡಿಯೋ ಸೋರಿಕೆಯಾಗಿ ಕೆಲವು ದಿನಗಳೇ ಕಳೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿರುವ ಅವರು ಖಾಸಗಿ ವಿಡಿಯೋವನ್ನು ಯಾರೂ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಲೈವ್ ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದ ಶಿಲ್ಪಿ, ನನಗೆ ಇಲ್ಲಿ ಸಂತೋಷವಿದೆ, ಮದುವೆಯೂ ಆಗುತ್ತದೆ. ಕೆಲವು ಜನರು ಬರೆಯುತ್ತಾರೆ. ಇನ್ನೂ ಕೆಲವರು ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ನೀವು ಏನಾದರೂ ಮಾಡಿ, ನನಗೆ ಸಹಾಯ ಮಾಡುವಂಥದಾಗಿರಲಿ. ಈವರೆಗೆ ನಾವು ಯಾರಿಗೂ ಗಟ್ಟಿ ಧ್ವನಿಯಲ್ಲಿ ಮಾತನಾಡಿದವರಲ್ಲ. ನಾನು ಸಣ್ಣ, ಬಡ ಕುಟುಂಬದಿಂದ ಬಂದಿದ್ದು ನನ್ನ ತಪ್ಪೇ? ಎಂದು ಪ್ರಶ್ನಿಸಿದ್ದಾರೆ.
ʼಕಿಡ್ನಿ ಸ್ಟೋನ್ʼ ಕರಗಿಸಲು ಇಲ್ಲಿದೆ ಮನೆ ಮದ್ದು
ಶಾಲೆಯಲ್ಲೇ ನಾನು ಹಾಡುತ್ತಿದ್ದೆ. ನಿಮ್ಮ ಪ್ರೀತಿಯಿಂದಾಗಿಯೇ ನಾನು ಇಲ್ಲಿದ್ದೇನೆ. ಒಂದು ಸಣ್ಣ ಹೆಸರು ಮಾಡಿಕೊಂಡಿದ್ದೇನೆಂದು ಕೆಲವರು ನನಗೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಹಾಡುಗಳಿಂದಲೇ ಜನರ ಮನಸ್ಸನ್ನು ರಂಜಿಸಲು ಬಯಸುತ್ತೇನೆ, ಇಂತಹ ವಿಷಯಗಳಿಂದ ಅಲ್ಲ. ನೀವೇಕೆ ಯೂಟ್ಯೂಬ್ನಲ್ಲಿ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್ ಮಾಡುತ್ತಿದ್ದೀರಿ ? ನನಗೆ ಅರ್ಥವಾಗುತ್ತಿಲ್ಲ. ನನ್ನ ಗೆಳೆಯ ಯಾರೆಂದು ಜನ ಹುಡುಕುತ್ತಿದ್ದಾರೆ, ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶಿಲ್ಪಿ ಹೇಳಿದ್ದಾರೆ.
ಭೋಜ್ಪುರಿ ಚಿತ್ರರಂಗದ ಉದಯೋನ್ಮುಖ ಗಾಯಕಿಯಾಗಿರುವ ಶಿಲ್ಪಿ ಅವರು ಕೇಸರಿ ಲಾಲ್ ಯಾದವ್, ಪವನ್ ಸಿಂಗ್, ರಿತೇಶ್ ಪಾಂಡೆ, ಸಮರ್ ಸಿಂಗ್, ಅರವಿಂದ ಅಕೇಲಾ ಕಲ್ಲು ಮುಂತಾದವರ ಜತೆ ಹಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಕೆಲವು ಹಾಡುಗಳು ಜನಪ್ರಿಯವಾಗಿವೆ.