ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮುಗಿಲೆತ್ತರಕೆ ಏರಿರುವ ಕಾರಣ ವಾಹನ ಖರೀದಿಸಲು ಇಚ್ಚಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು ರಿಯಾಯಿತಿಗಳನ್ನು ನೀಡುತ್ತಿದೆ.
ಆದರೆ ಎಲೆಕ್ಟ್ರಿಕ್ ವಾಹನ ಹೊಂದಿದವರು ಚಾರ್ಜಿಂಗ್ ಪಾಯಿಂಟ್ ಗಳು ಹೆಚ್ಚಿನ ಕಡೆ ಲಭ್ಯವಿಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದರು. ಇದೀಗ ಹೀರೋ ಎಲೆಕ್ಟ್ರಿಕ್ ಒಂದು ವರ್ಷದೊಳಗೆ ದೇಶದಾದ್ಯಂತ 50000 ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ.
ಇದಕ್ಕಾಗಿ ಬೋಲ್ಟ್ ಕಂಪನಿಯೊಂದಿಗೆ ಹೀರೋ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದ್ದು, ಅಲ್ಲದೆ ಹೀರೋ ಎಲೆಕ್ಟ್ರಿಕ್ ದ್ವಿಚಕ್ರವಾಹನ ಹೊಂದಿರುವ 2000 ಸವಾರರಿಗೆ ಕಂಪನಿಯು ಉಚಿತವಾಗಿ ಚಾರ್ಜಿಂಗ್ ಯೂನಿಟ್ ನೀಡಲಿದೆ ಎಂದು ಹೇಳಲಾಗಿದೆ.