ಹಿಂದೂ ಧರ್ಮದಲ್ಲಿ ಶಕುನ, ಅಪಶಕುನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.
ದಿನಚರಿಯಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು ಎಚ್ಚರಿಸುತ್ತವೆ. ಅನೇಕ ಬಾರಿ ನಾವು ಆ ಘಟನೆಗಳನ್ನು ನಿರ್ಲಕ್ಷಿಸುತ್ತೇವೆ. ಆದ್ರೆ ಆ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಲ್ಲಿ ಮುಂದಾಗುವ ನಷ್ಟವನ್ನು ತಪ್ಪಿಸಬಹುದಾಗಿದೆ.
ನೀರು ತುಂಬಿರುವ ಲೋಟ ಕೈತಪ್ಪಿ ಕೆಳಗೆ ಬಿದ್ರೆ ಮುಂದೆ ದೊಡ್ಡ ರೋಗ ಕಾಡಲಿದೆ ಎಂದರ್ಥ.
ಊಟಕ್ಕೆ ಬಳಸುವ ಎಣ್ಣೆ ಕೈತಪ್ಪಿ ಕೆಳಗೆ ಬಿದ್ರೆ ಖರ್ಚು ಹೆಚ್ಚಾಗಲಿದೆ. ಈ ತೈಲವನ್ನು ತಾಯಿ ಲಕ್ಷ್ಮಿ ಸಂಕೇತವೆಂದು ಪರಿಗಣಿಸಲಾಗಿದೆ.
ಪೂಜೆ ವೇಳೆ ಅಥವಾ ಆರತಿ ವೇಳೆ ದೀಪ ಆರಿದ್ರೆ ಕುಟುಂಬದ ವ್ಯಕ್ತಿಯೊಬ್ಬರ ಪ್ರಾಣಕ್ಕೆ ಅಪಾಯವಿದೆ ಎಂದರ್ಥ.
ಗೃಹಿಣಿ ಕೈನಿಂದ ಕುಂಕುಮ ಕೆಳಗೆ ಬಿದ್ದಲ್ಲಿ ಆಕೆ ಪತಿ ಜೀವಕ್ಕೆ ತೊಂದರೆಯಿದೆ ಎಂದು ನಂಬಲಾಗಿದೆ.
ಹಾಲು ಉಕ್ಕಿ ಕೆಳಗೆ ಬಿದ್ದರೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಜೊತೆಗೆ ಮಾನಸಿಕ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಕೈನಿಂದ ಉಪ್ಪು ಬಿದ್ದರೆ ಮುಂದಿನ ಜನ್ಮದಲ್ಲಿ ಕಷ್ಟ ಎದುರಾಗಲಿದೆ ಎಂದರ್ಥ.