ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹೆಚ್ಚಿನ ನಿಯಮ ಉಲ್ಲಂಘಿಸುವವರ ಪಟ್ಟಿಯಲ್ಲಿ ಕುಡುಕರೇ ಅಗ್ರಸ್ಥಾನಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ 1,852 ಮಂದಿ ಮೆಟ್ರೋ ರೈಲುಗಳಲ್ಲಿ ಅಥವಾ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಅವರಿಂದ 4,18,445 ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ.
ಅತಿಕ್ರಮಣ ಪ್ರವೇಶ, ಅಲಾರಂ ದುರುಪಯೋಗಪಡಿಸಿಕೊಳ್ಳುವವರು ಮೆಟ್ರೋದಲ್ಲಿ ನಿಯಮ ಉಲ್ಲಂಘಿಸುವವರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
ಎ.ಆರ್. ರೆಹಮಾನ್ ಹಾಡಿಗೆ ಭರತನಾಟ್ಯ ಸ್ಟೆಪ್ಸ್ ಹಾಕಿದ ವಿದೇಶಿಗರು…..!
ವೀಕೆಂಡ್ನಲ್ಲಿ ಕುಡಿದು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮೆಟ್ರೊ ಅಧಿಕಾರಿಗಳು ಹೇಳುತ್ತಾರೆ. ಕುಡಿದು ಬಂದರೂ ಮೆಟ್ರೊ ರೈಲು ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ, ಅವರ ಮೇಲೆ ನಿಗಾ ಇರಿಸಿ ಮತ್ತು ಅವರಿಂದ ಸಹ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.
ರಕ್ಷಣೆಗಾಗಿ ಮೊಬೈಲ್ ತಂಡಗಳನ್ನು ಹೊಂದಿದ್ದೇವೆ ಮತ್ತು ಸಾಮಾನ್ಯ ಉಡುಪಿನಲ್ಲಿರುವ ಮಾರ್ಷಲ್ಗಳು ಜನರ ನಡುವಿನಲ್ಲಿ ಕಣ್ಗಾವಲಿಗೆ ಇರಲಿದ್ದಾರೆ.
ರೈಲಿನೊಳಗಿನ ಕ್ಯಾಮೆರಾಗಳು ಮತ್ತು ಪ್ಲಾಟ್ಫಾರ್ಮ್ನಲ್ಲಿರುವ ಕ್ಯಾಮೆರಾಗಳ ಮೂಲಕ ನಿಯಂತ್ರಣ ಕೊಠಡಿಯಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.