ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು, ಹಲಾಲ್ -ಜಟ್ಕಾ ಕಟ್ ಮೊದಲಾದ ವಿವಾದಗಳು ನಡೆಯುತ್ತಿರುವ ಮಧ್ಯೆ, ಹಿಂದೂ-ಮುಸ್ಲಿಂ ಸಾಮರಸ್ಯದ ಪ್ರಕರಣಗಳೂ ಸಹ ವರದಿಯಾಗುತ್ತಿವೆ. ರಾಮ ನವಮಿ ದಿನದಂದು ಮೆರವಣಿಗೆಯಲ್ಲಿ ಹೋಗುತ್ತಿದ್ದವರಿಗೆ ಮುಸ್ಲಿಮರು ಪಾನಕ, ಮಜ್ಜಿಗೆ ವಿತರಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿತ್ತು.
ಇದೀಗ ಕೋಮು ಸಾಮರಸ್ಯದ ಮತ್ತೊಂದು ಘಟನೆ ವರದಿಯಾಗಿದ್ದು, ಕೊಪ್ಪಳ ಜಿಲ್ಲೆ ಕಾರಟಗಿ ಹನುಮ ಮಾಲಾಧಾರಿಗಳಿಗೆ ಮುಸ್ಲಿಮರು ಹಣ್ಣು-ಹಂಪಲು ವಿತರಿಸಿದ್ದರ ಜೊತೆಗೆ ಅಡಿಗೆ ಬಡಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ 45ಕ್ಕೂ ಹೆಚ್ಚು ಮಾಲಾಧಾರಿಗಳು ಪಟ್ಟಣದ ಶ್ರೀದೇವಿ ಬೀರೇಶ್ವರಿ ಸಮುದಾಯ ಭವನದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದು, ಇವರುಗಳಿಗೆ ಮಂಗಳವಾರ ರಾತ್ರಿ ಮುಸ್ಲಿಮರು ಊಟ ಬಡಿಸಿದ್ದಾರೆ.