ಕೊರೊನಾ ವೈರಸ್ ಸೋಂಕು ಸ್ವಲ್ಪ ತಗ್ಗಿದ್ದರೂ ಹೊಸ ಹೊಸ ಸೂಕ್ಷ್ಮಜೀವಿಗಳಿಂದ ಆತಂಕ ಎದುರಾಗಿದೆ. ಬ್ರೂವರ್ಸ್ ಯೀಸ್ಟ್, ಅಣಬೆಗಳು, ರೋಕ್ಫೋರ್ಟ್ ಚೀಸ್ ಮತ್ತು ಪೆನ್ಸಿಲಿನ್‌ನಂತಹ ಪ್ರತಿಜೀವಕಗಳ ಉತ್ಪಾದನೆ ಸೇರಿದಂತೆ ಶಿಲೀಂಧ್ರಗಳ ಪ್ರಯೋಜನಗಳ ಬಗ್ಗೆ ನಮಗೆ ಸಾಕಷ್ಟು ತಿಳಿದಿದೆ. ಆದ್ರೆ ಸಾಂಕ್ರಾಮಿಕ ರೋಗಗಳ ಸರಮಾಲೆಯ ನಡುವೆ ಈ ಶಿಲೀಂಧ್ರಗಳೇ ಮನುಷ್ಯರಿಗೆ ಮಾರಕವಾಗಬಹುದು.
ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ವೈರಸ್‌ಗಳಿಂದ ಉಂಟಾಗುವ ಅಪಾಯದ ಬಗ್ಗೆ ಕೋವಿಡ್ -19 ಜಾಗೃತಿ ಮೂಡಿಸಿದೆ ಅಂದ್ರೂ ತಪ್ಪಾಗಲಾರದು. ಆದ್ರೆ ವೈರಸ್ ಗಳ ಮೇಲೆ ಗಮನ ಕೇಂದ್ರೀಕರಿಸಿ ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳಿಂದ ಇರುವ ಭಯಾನಕ ಅಪಾಯವನ್ನು ಕಡೆಗಣಿಸಲಾಗ್ತಾ ಇದೆ. 2021ರ ಮಧ್ಯದಲ್ಲಿ ಕೊರೊನಾದ ಗಂಭೀರ ಲಕ್ಷಣಗಳಿಂದ ಬಳಲುತ್ತಿದ್ದ ಕೆಲವು ರೋಗಿಗಳಲ್ಲಿ ಶಿಲೀಂಧ್ರ ಸೋಂಕು ಪತ್ತೆಯಾಗಿತ್ತು.
ಕೊರೋನಾ ಸಂಕಷ್ಟದ ಹೊತ್ತಲ್ಲಿ ಬಡವರ ಹಸಿವು ನೀಗಿಸಿದ ಗರೀಬ್ ಕಲ್ಯಾಣ್ ಅನ್ನ ಯೋಜನೆ ಶ್ಲಾಘಿಸಿದ ಐಎಂಎಫ್
ಕೋವಿಡ್ ನಿಂದ ಚೇತರಿಸಿಕೊಂಡವರು ಕೂಡ ಫಂಗಸ್ ದಾಳಿಯಿಂದ ನಲುಗಿದ್ದರು. ಆಸ್ಪರ್ಜಿಲೊಸಿಸ್ ನಿಂದಾಗಿ ರೋಗಿಗಳಲ್ಲಿ ಉಸಿರಾಟದ ಸೋಂಕು ಕಂಡುಬಂದಿತ್ತು. ಭಾರತದಲ್ಲಿ ಆಕ್ರಮಣಕಾರಿ ಯೀಸ್ಟ್ ಸೋಂಕುಗಳು ಕೂಡ ಅಪಾಯಕಾರಿಯೇ. ಆದ್ರೆ ಅದೆಲ್ಲದಕ್ಕಿಂತಲೂ ಗಂಭೀರವಾದ ಶಿಲೀಂಧ್ರಗಳ ಸೋಂಕು-ಮ್ಯೂಕೋರ್ಮೈಕೋಸಿಸ್, ದೀರ್ಘಕಾಲದ ತೀವ್ರ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗುತ್ತದೆ.
ಶಿಲೀಂಧ್ರಗಳು ಭೂಮಿಯ ಮೇಲಿನ ಅತ್ಯಂತ ವೈವಿಧ್ಯಮಯ ಮತ್ತು ಬಹುಮುಖ ಜೀವಿಗಳಲ್ಲೊಂದು. ಸೌತ್ ವೆಸ್ಟರ್ನ್ ಯುನೈಟೆಡ್ ಸ್ಟೇಟ್ಸ್, ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಈ ಶಿಲೀಂಧ್ರಗಳ ಹಾವಳಿ ಹೆಚ್ಚಾಗಿದೆ. ಕೋಕ್ಸಿಡಿಯೋಡೋಮೈಕೋಸಿಸ್ ಎಂದು ಇದನ್ನು ಕರೆಯಲಾಗುತ್ತದೆ. ಇವುಗಳಿಂದ ಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯವಿದೆ ಅನ್ನೋದು ಬಹಳ ಹಿಂದೆಯೇ ದೃಢಪಟ್ಟಿದೆ. ಈ ಶಿಲೀಂಧ್ರ ಮಣ್ಣಿನಲ್ಲಿ ಕಂಡುಬರುತ್ತದೆ.
ದುಡ್ಡಿನ ಆಸೆಗಾಗಿ 90 ಲಸಿಕೆಗಳನ್ನು ಸ್ವೀಕರಿಸಿದ 60ರ ವೃದ್ಧ..!
ಸೌತ್ ವೆಸ್ಟರ್ನ್ ಅಮೆರಿಕದಲ್ಲಿ ವ್ಯಾಲಿ ಜ್ವರದ ಪ್ರಕರಣಗಳು ಹೆಚ್ತಾನೇ ಇವೆ. ಕಳೆದ ಒಂದು ದಶಕದಿಂದ್ಲೂ ಈ ಪ್ರದೇಶ ಎಂಡಮಿಕ್ ಸ್ಥಿತಿಯಲ್ಲಿದೆ. ಹವಾಮಾನ ಬದಲಾವಣೆ ಮರುಭೂಮಿ ವಲಯಗಳನ್ನು ವಿಸ್ತರಿಸುವುದರಿಂದ ಅಂತಹ ಪ್ರದೇಶದಲ್ಲಿ ಕೋಕ್ಸಿಡಿಯೋಯಿಡ್ಸ್ ಇಮಿಟಿಸ್ ಶಿಲೀಂಧ್ರ ಹುಟ್ಟಿಕೊಳ್ಳುತ್ತದೆ. ಶಿಲೀಂಧ್ರಗಳ ಬೀಜಕಗಳನ್ನು ಹೊಂದಿರುವ ಧೂಳು ಉಸಿರಾಟದಲ್ಲಿ ಸೇರಿದಾಗ ಮನುಷ್ಯರಲ್ಲಿ ವ್ಯಾಲಿ ಜ್ವರ ಶುರುವಾಗುತ್ತದೆ. ಬರಗಾಲ ಬಂದಾಗ ಧೂಳು ಹೆಚ್ಚು. ಭೂಕಂಪದಂತಹ ವೈಪರೀತ್ಯಗಳು ಕೂಡ ಧೂಳು ವ್ಯಾಪಕವಾಗಿ ಹರಡಲು ಕಾರಣವಾಗುತ್ತವೆ. ಈ ಸಮಯದಲ್ಲಿ ಜನರಿಗೆ ವ್ಯಾಲಿ ಜ್ವರ ಅಂಟಿಕೊಳ್ಳುತ್ತದೆ.
ಕ್ಯಾಲಿಫೋರ್ನಿಯಾದಲ್ಲಿ ಶಿಲೀಂಧ್ರ ರೋಗಕಾರಕಗಳಿಂದ ಉಂಟಾಗುವ ಸಾಂಕ್ರಾಮಿಕ ಬೆದರಿಕೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಕ್ಯಾಂಡಿಡಾ ಔರಿಸ್ ಎಂಬ ಆಕ್ರಮಣಕಾರಿ ಸೋಂಕು ಕೂಡ ಅತ್ಯಂತ ಅಪಾಯಕಾರಿಯೆಂದು ಸಾಬೀತಾಗಿದೆ. ಸಾವಿಗೆ ಕಾರಣವಾಗುವ ಮಲ್ಟಿಡ್ರಗ್-ನಿರೋಧಕ ಯೀಸ್ಟ್ ಕೂಡ ಸದ್ಯ ಇಡೀ ವಿಶ್ವವನ್ನೇ ಬೆದರಿಸಬಲ್ಲ ಸೋಂಕುಗಳಲ್ಲೊಂದು. ಮೂರು ಖಂಡಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳುವ ಸೋಂಕಿಗೆ ಮಾನವ ಪ್ರೇರಿತ ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ.
2009ರಲ್ಲಿ ಮೊದಲು ಗುರುತಿಸಲ್ಪಟ್ಟ ಕ್ಯಾಂಡಿಡಾ ಆರಿಸ್ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಸ್ತುಗಳ ಮೇಲ್ಮೈ ಮೂಲಕ, ಆಸ್ಪತ್ರೆಯ ವಾತಾವರಣದಲ್ಲಿ, ನೈಸರ್ಗಿಕ ಪರಿಸರ ವ್ಯವಸ್ಥೆಗಳಲ್ಲಿ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಶಿಲೀಂಧ್ರಗಳ ಸೋಂಕು ತಡೆಗಟ್ಟಲು ಆಂಟಿಮೈಕ್ರೊಬಿಯಲ್‌ಗಳ ಬಳಕೆಯನ್ನು ನಿರ್ಬಂಧಿಸಬೇಕಯ. ಉದಾಹರಣೆಗೆ ಕೃಷಿಯಲ್ಲಿ ಆಂಟಿಫಂಗಲ್ ಬಳಕೆ, ಪ್ರಾಣಿಗಳ ಸಂಖ್ಯೆ, ಜನಸಂಖ್ಯೆ ಮತ್ತು ಪರಿಸರ ವ್ಯವಸ್ಥೆಗಳ ಸಮಗ್ರ ಕಣ್ಗಾವಲು ಅತ್ಯಗತ್ಯ. ಜಾಗತಿಕ ಮಟ್ಟದಲ್ಲಿ ಅರಿವು ಮೂಡಿಸಿದರೆ ಮಾತ್ರ ಶಿಲೀಂಧ್ರ ಝೂನೋಟಿಕ್ ರೋಗಗಳ ಚಕ್ರದಿಂದ ದೂರವಿರಲು ಸಾಧ್ಯ.