ದೇಶದಲ್ಲಿ ಮೊದಲ ಕೊರೊನಾ ವೈರಸ್ ಎಕ್ಸ್ಇ ರೂಪಾಂತರ ಪ್ರಕರಣವು ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ ಕಪ್ಪಾ ರೂಪಾಂತರದ ಪ್ರಕರಣ ಕೂಡ ವರದಿಯಾಗಿದೆ. ಹೊಸ ರೂಪಾಂತರಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಯಾವುದೇ ಗಂಭೀರ ಲಕ್ಷಣಗಳು ಗೋಚರವಾಗಿಲ್ಲ ಎಂದು ಬಿಎಂಸಿ ಹೇಳಿದೆ.
ಕೋವಿಡ್ 19ನ ಈ ಹೊಸ ರೂಪಾಂತರವು ಈ ಹಿಂದಿನ ಯಾವುದೇ ರೂಪಾಂತರಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ಮಾಹಿತಿ ನೀಡಿತ್ತು.
ಈ ವರ್ಷದ ಆರಂಭದಲ್ಲಿ ಬ್ರಿಟನ್ನಲ್ಲಿ ಕೊರೊನಾ ವೈರಸ್ನ ಈ ಹೊಸ ತಳಿ ಪತ್ತೆಯಾಗಿದೆ. ಬ್ರಿಟನ್ನ ಆರೋಗ್ಯ ಸಂಸ್ಥೆ ಏಪ್ರಿಲ್ 3ರಂದು ತಾವು ಜನವರಿ 19ರಂದು ಎಕ್ಸ್ಇ ಮೊದಲ ಪ್ರಕರಣವನ್ನು ಪತ್ತೆ ಹಚ್ಚಿದ್ದೇವೆ ಎಂದು ಹೇಳಿದೆ. ಬ್ರಿಟನ್ನಲ್ಲಿ ಈವರೆಗೆ 637 ಮಂದಿ ಕೊರೊನಾ ಎಕ್ಸ್ಇ ರೂಪಾಂತರದ ಸೋಂಕನ್ನು ಹೊಂದಿದ್ದಾರೆ.