ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಒತ್ತಾಯಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಪೊಲೀಸ್ ಅಧಿಕಾರಿಗಳಿಗೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.
ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಯಥಾವತ್ತಾಗಿ ಪಾಲಿಸಬೇಕು. ಶಬ್ದ ಮಾಲಿನ್ಯ ಮಾಡುತ್ತಿದ್ದರೆ ಕೇಸ್ ಹಾಕಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪರ್ಸ್ ನಲ್ಲಿ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಬೇಡಿ
ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಇನ್ಸ್ಟಿ ಟ್ಯೂಟ್, ಕಾರ್ಯಕ್ರಮಗಳು ಸೇರಿದಂತೆ ಎಲ್ಲೆಡೆ ನಿಗಾವಹಿಸಿ. ನಿಯಂತ್ರಣ ಮಂಡಳಿ ಕಾಯ್ದೆ 2000 ಅಡಿ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.