ಬೆಂಗಳೂರಿನ ಜಯನಗರದ ಅಕ್ಕಮಹಾದೇವಿ ಪಾರ್ಕ್ ನಲ್ಲಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಯನಗರದ 7 ನೇ ಬ್ಲಾಕ್ ನಿವಾಸಿ ಪ್ರಸನ್ನ(42) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಮಾರ್ಚ್ 31 ರಂದು ಸಂಜೆ ಪಾರ್ಕ್ ನಲ್ಲಿ ಶಿಲ್ಪಾ ಮತ್ತು ಸುಮಾ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಸನ್ನ ವಿಡಿಯೋ ಮಾಡಿಕೊಂಡಿದ್ದಾನೆ.
ಈತನ ವರ್ತನೆಯಿಂದ ಅನುಮಾನಗೊಂಡ ಮಹಿಳೆಯರು ಪಾರ್ಕ್ ನಲ್ಲಿ ಇದ್ದವರ ನೆರವಿನೊಂದಿಗೆ ಪ್ರಸನ್ನನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಶಿಲ್ಪಾ ಮತ್ತು ಸುಮಾ ಅವರ ಫೋಟೋ, ವಿಡಿಯೋಗಳು ಕಂಡುಬಂದಿದೆ. ಪ್ರಸನ್ನನನ್ನ ಹಿಡಿದ ಸ್ಥಳೀಯರು ಆತನನ್ನು ಜಯನಗರ ಪೊಲೀಸರಿಗೊಪ್ಪಿಸಿದ್ದಾರೆ.