ಬೆಂಗಳೂರು: ಪಬ್ ಜಿ ಗೇಮ್ ಹುಚ್ಚಾಟಕ್ಕೆ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿ ರೈಲನ್ನೆ ತಡೆದು ನಿಲ್ಲಿಸಿದ ಘಟನೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ.
ಬಾಲಕನ ಹುಚ್ಚಾಟಕ್ಕೆ 90 ನಿಮಿಷಗಳ ಕಾಲ ಕಾಚಿಗೂಡಾ ಎಕ್ಸ್ ಪ್ರೆಸ್ ರೈಲನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಬಾಲಕನ ಸ್ನೇಹಿತ ಇದೇ ರೈಲಿನಲ್ಲಿ ಊರಿಗೆ ಹೋಗುತ್ತಿದ್ದ. ತನ್ನ ಪಬ್ ಜಿ ಪಾರ್ಟ್ನರ್ ಊರಿಗೆ ಹೋಗುವುದನ್ನು ತಡೆಯಲೆಂದು ಬಾಲಕ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾನೆ.
ಕೋವಿಡ್ ನಾಲ್ಕನೇ ಅಲೆ ಆತಂಕ: ಹಲ್ಲು, ಒಸಡು ಸಮಸ್ಯೆ ಉಂಟಾಗಬಹುದು, ರೋಗಲಕ್ಷಣ ಗಮನಿಸಿ
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾಚಿಗೂಡ ಎಕ್ಸ್ ಪ್ರೆಸ್ ರೈಲು ನಿಲ್ಲಿಸಿ 90 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಾಲಕ ತನ್ನ ಪಬ್ ಜಿ ಹುಚ್ಚಾಟಕ್ಕೆ ಮಾಡಿದ ಹುಸಿ ಬಾಂಬ್ ಕರೆ ಇದು ಎಂದು ಗೊತ್ತಾಗುತ್ತಿದ್ದಂತೆ ಬಾಲಕನನ್ನು ಕರೆದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಬಾಲಕ ಅಪ್ರಾಪ್ತನಾಗಿದ್ದುದರಿಂದ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.