ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದ ಆರಂಭವಾಗಿದ್ದು, ಇಂದು ಯುಗಾದಿ ಹೊಸತೊಡಕು ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಗಳು ಹಲಾಲ್ ಮಾಂಸ ಖರೀದಿಸಬೇಡಿ ಎಂದು ಅಭಿಯಾನ ಆರಂಭಿಸಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹಲಾಲ್ ಕಟ್ ವಿರೋಧಿಸಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಹಿಂದೂ ಸಹೋದರ ಸಹೋದರಿಯರೆ ಹಲಾಲ್ ಸೇವನೆ, ಹಲಾಲ್ ಮಾಂಸ ಖರೀದಿ ಮಾಡಬೇಡಿ. ಹಲಾಲ್ ಕಟ್ ನಲ್ಲಿ ಪ್ರಾಣಿಯನ್ನು ವಧಿಸುವ ವ್ಯಕ್ತಿ ಮೆಕ್ಕಾ ಕಡೆ ಮುಖ ಮಾಡಿರುತ್ತಾನೆ. ಆತ ಮುಸಲ್ಮಾನ ವ್ಯಕ್ತಿಯೇ ಆಗಿರುತ್ತಾನೆ. ಖುರಾನ್ ಶ್ಲೋಕವೊಂದನ್ನು ಹೇಳಿ ಪ್ರಾಣಿ ವಧಿಸುತ್ತಾನೆ. ಹಿಂದೂಗಳು ಹಲಾಲ್ ಮಾಂಸ ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ.
ರಸ್ತೆ ಮಧ್ಯೆ ಮೈನ್ ಗಳನ್ನಿಟ್ಟ ರಷ್ಯಾ; ನಿರ್ಭಯವಾಗಿ ವಾಹನ ಚಲಾಯಿಸಿದ ಉಕ್ರೇನ್ ಚಾಲಕರು..!
ಜನರು ಸ್ವಯಂ ಜಾಗೃತಿಯಿಂದ ಹಲಾಲ್ ಬಹಿಷ್ಕರಿಸಬೇಕು ಎಂದು ಪ್ರಶಾಂತ್ ಸಂಬರಗಿ ವಿಡಿಯೋ ಸಂದೇಶ ರವಾನಿಸಿದ್ದಾರೆ.