ಇಂದು ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಎಲ್ಲಾ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಪ್ರಧಾನಿ ವಿರುದ್ಧದ ಅವಿಶ್ವಾಸ ಮಂಡನೆಯನ್ನು ಸೋಲಿಸಲು ಸರ್ಕಾರವು ಆಶಾವಾದವನ್ನು ಹೊಂದಿದೆ. ಹೀಗಾಗಿ ಇಂದು ನಡೆಯಲಿರುವ ರಾಷ್ಟ್ರೀಯ ಅಸೆಂಬ್ಲಿ ಪ್ರಕ್ರಿಯೆಗೆ ಹಾಜರಾಗುವಂತೆ ಪಕ್ಷದ ಶಾಸಕರಿಗೆ ಸೂಚನೆ ನೀಡಿದೆ.
ಪ್ರಧಾನಿ ಇಮ್ರಾನ್ ಖಾನ್ ನಿರ್ದೇಶನದ ಬಳಿಕ ಸೆನೆಟರ್ ಫೈಸಲ್ ಜಾವೇದ್ ಖಾನ್ ಅವಿಶ್ವಾಸ ನಿರ್ಣಯದ ಪಿತೂರಿಯಿಂದ ದೂರವಿರುವಂತೆ ಪಕ್ಷದ ಶಾಸಕರನ್ನು ಕೇಳಿದ್ದರು. ಮತದಾನದ ದಿನದಂದು ಪಕ್ಷದ ಅಧ್ಯಕ್ಷರ ಸೂಚನೆಗಳನ್ನು ಉಲ್ಲಂಘಿಸಿದರೆ 63(ಎ) ವಿಧಿ ಹೇರಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಇಮ್ರಾನ್ ಖಾನ್ ಅವಿಶ್ವಾಸ ಮತದಲ್ಲಿ ಬಹುಮತವನ್ನು ಕಳೆದುಕೊಳ್ಳುವ ಮೊದಲ ಪಾಕ್ ಪ್ರಧಾನಿ ಎನಿಸಿಕೊಳ್ಳುವ ಸಂಭವವಿದೆ. ಇಮ್ರಾನ್ ಖಾನ್ಗೆ 172 ಎಂಎನ್ಎ ಬೆಂಬಲದ ಅವಶ್ಯಕತೆ ಇದೆ.