ಕನ್ಸಾಸ್: ಛಾಯಾಗ್ರಾಹಕರೊಬ್ಬರು ಅತ್ಯಂತ ಅಸಾಮಾನ್ಯವಾದ ಮಿಂಚಿನ ಹೊಡೆತವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಅಮೆರಿಕಾದ ಕನ್ಸಾಸ್ನಲ್ಲಿ ಈ ಬೆಚ್ಚಿಬೀಳಿಸುವ ಘಟನೆ ದಾಖಲಾಗಿದೆ.
ತನ್ನ ಫೋನ್ನಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ ಛಾಯಾಗ್ರಾಹಕ ಟೇಲರ್ ವೊನ್ಫೆಲ್ಡ್, ಇದು ತಾನು ಸೆರೆಹಿಡಿದಿರೋ ಬೆಚ್ಚಿಬೀಳಿಸುವ ಮಿಂಚು ಎಂದು ಹೇಳಿದ್ದಾರೆ.
ಕನ್ಸಾಸ್-ಮಿಸೌರಿ ಗಡಿಯ ಸುತ್ತಲಿನ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಮಿಂಚು ಕೂಡ ಕಾಣಿಸಿಕೊಂಡಿದೆ. ಇನ್ನು ಈ ಬಗ್ಗೆ ಮಾತನಾಡಿದ ಹವಾಮಾನ ಶಾಸ್ತ್ರಜ್ಞ ಕ್ರಿಸ್ ವಾಗಸ್ಕಿ, ಸಾಮಾನ್ಯವಾಗಿ ಮೇಲ್ಮುಖವಾಗಿ ಮಿಂಚು ಬಂದಾಗ ಏನಾಗುತ್ತದೆ ಎಂದರೆ, ನೀವು ಗಗನಚುಂಬಿ ಕಟ್ಟಡ ಅಥವಾ ರೇಡಿಯೊ ಟವರ್ನಂತಹ ಎತ್ತರದ ವಸ್ತುವಿನ ಮೇಲ್ಭಾಗದಲ್ಲಿ ಬಲವಾದ ವಿದ್ಯುತ್ ಕ್ಷೇತ್ರವನ್ನು ಹೊಂದಿದ್ದೀರಿ. ಇದು ಮೋಡದಲ್ಲಿನ ವಿದ್ಯುತ್ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿದಾಗ ಈ ರೀತಿಯ ಮಿಂಚು ಉಂಟಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ವಿಡಿಯೋ ಅಪರೂಪದ ಮೇಲ್ಮುಖವಾದ ಹೊಡೆತದೊಂದಿಗೆ ಮಿಂಚಿನ ಬೋಲ್ಟ್ ಉಂಟಾಗುತ್ತದೆ. ಬೋಲ್ಟ್ ನೆಲದಲ್ಲಿ ಪ್ರಾರಂಭವಾಗಿ ಮೋಡದ ಕಡೆಗೆ ಚಲಿಸುತ್ತದೆ. ಇದು ಮೋಡದಿಂದ ನೆಲಕ್ಕೆ ಹೋಗುವ ಸಾಂಪ್ರದಾಯಿಕ ಮಿಂಚಿನ ಹೊಡೆತಗಳಿಗಿಂತ ಭಿನ್ನವಾಗಿದೆ. ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ 2.3 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.