ಮಹತ್ವದ ಬದಲಾವಣೆಯೊಂದರಲ್ಲಿ ಬಿಎಂಆರ್ಸಿಎಲ್ ಒಂದು ದಿನ ಹಾಗೂ ಮೂರು ದಿನಗಳು ಮಾನ್ಯವಿರುವ ಪಾಸ್ಗಳನ್ನು ಪರಿಚಯಿಸಿದೆ. ಇದು ಏಪ್ರಿಲ್ 2 ರಿಂದ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಲಭ್ಯವಿರಲಿದೆ.
200 ರೂಪಾಯಿ ಮೌಲ್ಯದ ಒಂದು ದಿನದ ಪಾಸ್ 50 ರೂಪಾಯಿಗಳನ್ನು ಗ್ರಾಹಕರಿಗೆ ಮರಳಿ ನೀಡುವ ವ್ಯವಸ್ಥೆಯನ್ನು ಹೊಂದಿರುವ ಭದ್ರತಾ ಠೇವಣಿಗಳನ್ನು ಒಳಗೊಂಡಿದೆ. ಅಲ್ಲದೇ ಈ ಪಾಸ್ನ ಮೂಲಕ ಅನಿಯಮಿತ ಪ್ರಯಾಣವನ್ನು ಮಾಡಬಹುದಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
400 ರೂಪಾಯಿ ಮೌಲ್ಯದ ಮೂರು ದಿನಗಳ ಪಾಸ್ 50 ರೂಪಾಯಿ ಮರುಪಾವತಿಯನ್ನು ಹೊಂದಿದೆ. ಪ್ರಯಾಣಿಕರು ನಿಲ್ದಾಣದ ಟಿಕೆಟ್ ಕೌಂಟರ್ಗಳಲ್ಲಿ ಪಾಸ್ಗಳನ್ನು ಖರೀದಿಸಬಹುದು. 50 ರೂಪಾಯಿ ಭದ್ರತಾ ಠೇವಣಿಯ ಮರುಪಾವತಿಗಾಗಿ ಕಾರ್ಡ್ ಹಿಂತಿರುಗಿಸಬೇಕು.