alex Certify BREAKING NEWS: ವಣ್ಣಿಯಾರ್​ ಸಮುದಾಯಕ್ಕೆ ನೀಡಲಾದ ಮೀಸಲಾತಿ ರದ್ದುಗೊಳಿಸಿದ ʼಸುಪ್ರೀಂ ಕೋರ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವಣ್ಣಿಯಾರ್​ ಸಮುದಾಯಕ್ಕೆ ನೀಡಲಾದ ಮೀಸಲಾತಿ ರದ್ದುಗೊಳಿಸಿದ ʼಸುಪ್ರೀಂ ಕೋರ್ಟ್ʼ

ತಮಿಳುನಾಡಿನ ಅತ್ಯಂತ ಹಿಂದುಳಿದ ಸಮುದಾಯವಾದ ವಣ್ಣಿಯಾರ್​ಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ನೀಡಲಾಗುತ್ತಿದ್ದ 10.5 ಪ್ರತಿಶತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್​ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿರನ್ನೊಳಗೊಂಡ ಪೀಠವು ಮೀಸಲಾತಿಯನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಎಂಬಿಸಿ ಗುಂಪಿನಲ್ಲಿರುವ ಉಳಿದ 115 ಸಮುದಾಯಗಳಿಗಿಂತ ವಿಭಿನ್ನವಾಗಿ ಪರಿಗಣಿಸಲು ವಣ್ಣಿಯಾಕುಲ ಕ್ಷತ್ರಿಯರನ್ನು ಒಂದು ಗುಂಪಿಗೆ ವರ್ಗೀಕರಿಸಲು ಯಾವುದೇ ಗಣನೀಯ ಆಧಾರವಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಮತ್ತು ಆದ್ದರಿಂದ ಇದು 2021 ರ ಕಾಯಿದೆಯು 14, 15 ಮತ್ತು 16 ರ ಪರಿಚ್ಛೇದಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ ನಾವು ಹೈಕೋರ್ಟ್‌ನ ತೀರ್ಪನ್ನು ಎತ್ತಿ ಹಿಡಿಯುತ್ತೇವೆ ಎಂದು ಪೀಠ ಹೇಳಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಆಗಿನ ಆಡಳಿತಾರೂಢ ಎಐಎಡಿಂಕೆ ಮಸೂದೆಯನ್ನು ಅಂಗೀಕರಿಸಿತ್ತು. ವಣ್ಣಿಯಾರ್ ​ಗಳಿಗೆ 10.5 ಶೇಕಡಾ ಆಂತರಿಕ ಮೀಸಲಾತಿಯನ್ನು ಒದಗಿಸಿತು. ಇದರ ಅನುಷ್ಠಾನಕ್ಕಾಗಿ ಕಳೆದ ವರ್ಷ ಜುಲೈನಲ್ಲಿ ಡಿಎಂಕೆ ಸರ್ಕಾರವು ಆದೇಶವನ್ನು ಹೊರಡಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...