ಬೆಂಗಳೂರು: ಯುಗಾದಿ ಸಂಭ್ರಮಕ್ಕೆ ಇನ್ನೆರಡು ದಿನ ಬಾಕಿ ಇರುವ ಸಂದರ್ಭದಲ್ಲಿ ರಾಜ್ಯದಲ್ಲಿ ಹಲಾಲ್ ಬಹಿಷ್ಕಾರ ಅಭಿಯಾನ ತೀವ್ರಗೊಂಡಿದ್ದು, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಬಾಯ್ಕಟ್ ಹಲಾಲ್ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಹಲಾಲ್ ನಿಷೇಧ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಭಾರತ ಹಾಗೂ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡಬೇಕು. ಎಲ್ಲಾ ಹಿಂದೂಗಳು ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ತಲೆ ತಿರುಗಿಸುವಂತಿದೆ ಈ ಫ್ರೆಂಚ್ ಫ್ರೈಸ್ ಬೆಲೆ….!
ಹಿಂದೆ ಅಕ್ಬರ್, ಔರಂಗಜೇಬ್ ಹಿಂದೂಗಳ ಮೇಲೆ ಟ್ಯಾಕ್ಸ್ ಹೇರುತ್ತಿದ್ದರು. ಈಗ ಹಲಾಲ್ ಎಂಬ ವಿಚಾರವನ್ನು ಹೇರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.