ತನ್ನ ಪತಿಯನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಉಕ್ರೇನ್ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದ ವೇಳೆಯಲ್ಲಿ ನನ್ನ ಪುತ್ರ ಅಳುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ.
ನಾನು ಮೊದಲು ಗುಂಡಿನ ಶಬ್ದವನ್ನು ಕೇಳಿದೆ. ಬಳಿಕ ಗೇಟನ್ನು ತೆರೆಯುವ ಶಬ್ದ ಹಾಗೂ ಅವರ ಹೆಜ್ಜೆ ಸದ್ದುಗಳನ್ನು ಕೇಳಿದೆ ಎಂದು ಮಹಿಳೆ ಹೇಳಿದ್ದಾರೆ.
ರಷ್ಯಾದ ಸೈನಿಕರು ಮೊದಲು ನಮ್ಮ ಸಾಕು ಶ್ವಾನವನ್ನು ಕೊಂದರು. ಬಳಿಕ ನನ್ನ ಪತಿಯನ್ನು ಕೊಂದರು. ನಾನು ನನ್ನ ಪತಿ ಎಲ್ಲಿ ಎಂದು ಕೇಳುತ್ತಲೇ ಇದ್ದೆ. ನಾನು ಗೇಟಿನ ಬಳಿ ಬಂದು ನೋಡಿದಾಗ ನನ್ನ ಪತಿಯ ಶವ ಕಾಣಿಸಿತು. ಬಳಿಕ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರಗೈದರು. ನನಗೆ ವಿರೋಧವೊಡ್ಡದಂತೆ ಗನ್ ಹಿಡಿದು ಬೆದರಿಸಿದರು. ನೀನು ಸುಮ್ಮನೇ ಇರದಿದ್ದರೆ ನಿನ್ನ ಮೆದುಳನ್ನು ಮನೆಯ ತುಂಬಾ ಚೆಲ್ಲುವ ಮೂಲಕ ನಿನ್ನ ಮಗುವಿಗೆ ತೋರಿಸುತ್ತೇನೆ ಎಂದು ಹೆದರಿಸಿದರು ಎಂದು ಹೇಳಿದ್ದಾರೆ.