ಕಳೆದೊಂದು ವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ಗಳೆರಡರ ಬೆಲೆಯಲ್ಲಿಯೂ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಇಂಧನ ಖರೀದಿಸುವವರಿಗೆ ಉಚಿತ ಟಿಕೆಟ್ ನೀಡಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್ ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಟಿಕೆಟ್ ವಿತರಿಸಿದಂತೆಯೇ ಉಚಿತವಾಗಿ ಇಂಧನಗಳನ್ನು ಖರೀದಿ ಮಾಡುವವರಿಗೂ ಕೂಪನ್ ನೀಡಲಿ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆಯ ಬಳಿಕ ಬಿಜೆಪಿಯು ಪೆಟ್ರೋಲ್ ಹಾಗೂ ಡೀಸೆಲ್ನ ಬೆಲೆಯನ್ನು ಹೆಚ್ಚಿಸುತ್ತಿದೆ. ಇವರೆಲ್ಲ ರಾಮ ಭಕ್ತರಲ್ಲ, ಬದಲಾಗಿ ರಾವಣ ಭಕ್ತರು. ಬಿಜೆಪಿ ನಾಯಕರು ಜನರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಬೇಕೆಂದು ಹೇಗೆ ಟಿಕೆಟ್ಗಳನ್ನು ವಿತರಿಸುತ್ತಿದ್ದಾರೋ ಅದೇ ರೀತಿ ಪೆಟ್ರೋಲ್, ಡೀಸೆಲ್ ಖರೀದಿ ಮಾಡುವವರಿಗೂ ಕೂಪನ್ಗಳನ್ನು ನೀಡಲಿ ಎಂದು ಆಗ್ರಹಿಸಿದ್ದಾರೆ.
ದೇಶದಲ್ಲಿ ಪ್ರತಿದಿನವೂ ಪರಿಷ್ಕರಣೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ದರವು ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಯಾವುದೇ ಬದಲಾವಣೆ ಆಗದೇ ಉಳಿದಿತ್ತು. ಆದರೆ ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸತತ ಏಳು ದಿನಗಳಿಂದ ಇಂಧನಗಳ ಬೆಲೆ ಏರಿಕೆ ಕಂಡಿದೆ.