ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಿಎಫ್ (ಭವಿಷ್ಯ ನಿಧಿ) ಸದಸ್ಯರು ಗಮನಿಸಬೇಕಾದ ಸುದ್ದಿಯೊಂದಿದೆ. ಪ್ರತಿ ತಿಂಗಳು ತಮ್ಮ ಉಳಿತಾಯದ ಒಂದು ಭಾಗವನ್ನು ತಮ್ಮ ನಿಧಿಗೆ ದೇಣಿಗೆ ನೀಡುವ ನೌಕರರು ಸರ್ಕಾರದಿಂದ ನಿರ್ವಹಿಸಲ್ಪಡುವ ಭವಿಷ್ಯ ನಿಧಿಗೆ ಸೇರ್ಪಡೆಯಾಗುತ್ತಾರೆ
ಭವಿಷ್ಯ ನಿಧಿಯಲ್ಲಿ ಹಣ ಹಾಕಿದ ಯಾರಾದರೂ ಅವರು 60 ವರ್ಷ ತಲುಪಿದ ನಂತರ ಅಥವಾ ಅದಕ್ಕಿಂತ ಮುಂಚೆಯೇ ಹಣ ತೆಗೆದುಕೊಳ್ಳಬಹುದು. ಆದರೂ ಒಬ್ಬ ವ್ಯಕ್ತಿಯು ನಿವೃತ್ತಿಯ ಮೊದಲು ತಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಬಯಸಿದರೆ ಅನುಸರಿಸಲು ಕೆಲವು ಷರತ್ತು ಮತ್ತು ಮಾರ್ಗಸೂಚಿಗಳಿವೆ.
2021ರ ಬಜೆಟ್ಗೆ ಮೊದಲು ಇಪಿಎಫ್ ಮೇಲಿನ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ ಭಾಷಣದಲ್ಲಿ ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಪಾವತಿಗಳಿಗೆ ತೆರಿಗೆ ವಿಧಿಸಬೇಕೆಂದು ಪ್ರಸ್ತಾಪಿಸಿದರು.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದು ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.
ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
ಅಧಿಸೂಚನೆಯ ಪ್ರಕಾರ, ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ವರ್ಷಕ್ಕೆ ರೂ.2.5 ಲಕ್ಷಕ್ಕಿಂತ ಹೆಚ್ಚಿನ ಪಾವತಿಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಉದ್ಯೋಗದಾತರು ಕೊಡುಗೆ ನೀಡದಿರುವ ಪ್ರಕರಣಗಳಲ್ಲಿ ಪಿಎಫ್ ಖಾತೆಗಳಿಗೆ ಈ ಮಿತಿಯು ವರ್ಷಕ್ಕೆ 5 ಲಕ್ಷ ರೂ.ವಾಗಿರುತ್ತದೆ.
ಉದ್ಯೋಗದಾತರು ನೌಕರನ ಮೂಲ ವೇತನದ ಶೇ.12 ಮತ್ತು ತುಟ್ಟಿಭತ್ಯೆಯನ್ನು ಇಪಿಎಫ್ಗೆ ಕೊಡುಗೆ ನೀಡುತ್ತಾನೆ. ಉದ್ಯೋಗಿಯ ವೇತನದಿಂದ ಇನ್ನೊಂದು ಭಾಗವಾಗಿ ಶೇ.12 ಕಡಿತಗೊಳಿಸುತ್ತಾನೆ.
ಉದ್ಯೋಗದಾತನ ಕೊಡುಗೆಯ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ, ಅದು ಯಾವುದೇ ಬಡ್ಡಿಯನ್ನು ಪಾವತಿಸುವುದಿಲ್ಲ.
ಹೊಸ ಪಿಎಫ್ ನಿಯಮಗಳು:
– ಅಸ್ತಿತ್ವದಲ್ಲಿರುವ ಪಿಎಫ್ ಖಾತೆಗಳನ್ನು ತೆರಿಗೆಗೆ ಒಳಪಡುವ ಕೊಡುಗೆ ಖಾತೆಗಳು ಮತ್ತು ತೆರಿಗೆಗೆ ಒಳಪಡದ ಕೊಡುಗೆ ಖಾತೆಗಳಾಗಿ ವಿಂಗಡಿಸಲಾಗುತ್ತದೆ.
– ತೆರಿಗೆಗೆ ಒಳಪಡದ ಖಾತೆಗಳು ತಮ್ಮ ಮುಕ್ತಾಯದ ಖಾತೆಯನ್ನು ಸಹ ಒಳಗೊಂಡಿರುತ್ತವೆ, ಇದು ಮಾರ್ಚ್ 31, 2021 ರ ಮುಕ್ತಾಯ ದಿನಾಂಕವನ್ನು ಹೊಂದಿರುತ್ತದೆ.
– ಹೊಸ ಪಿಎಫ್ ನಿಯಮಗಳು ಮುಂದಿನ ಆರ್ಥಿಕ ವರ್ಷದಿಂದ ಅಂದರೆ ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ.
– ಐಟಿ ನಿಯಮದಲ್ಲಿ 9ಡಿ ಸೆಕ್ಷನ್ ಅನ್ನು ಹೊಸದಾಗಿ ಸೇರಿಸಿದ್ದು, ಆ ಪ್ರಕಾರ ಪಿಎಫ್ ಆದಾಯದ ಮೇಲಿನ ಬಡ್ಡಿ ವಿಧಿಸಲಾಗುತ್ತದೆ.
– ತೆರಿಗೆ ವಿಧಿಸಬಹುದಾದ ಬಡ್ಡಿ ಲೆಕ್ಕಾಚಾರ ಮಾಡಲು ಅಸ್ತಿತ್ವದಲ್ಲಿರುವ ಪಿಎಫ್ ಖಾತೆಯೊಳಗೆ ಎರಡು ಪ್ರತ್ಯೇಕ ಖಾತೆ ರಚಿಸಲಾಗುತ್ತದೆ.