ರಾತ್ರಿ ವೇಳೆ ನೂರಾರು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ‘ಡೈನ್ ಇನ್ ದಿ ಡಾರ್ಕ್’ ಪರಿಚಯಿಸಲು ಮುಂದಾಗಿವೆ. ಸ್ಮೋಕ್ ಹೌಸ್ ಡೆಲಿ, ಪ್ಯಾರಡೈಸ್ ಬಿರಿಯಾನಿ, ಫ್ಯಾಟಿ ಬಾವೊ, ಹಿಚ್ಕಿ, ಮೇನ್‌ಲ್ಯಾಂಡ್ ಚೀನಾ, ಓಹ್ ಕಲ್ಕತ್ತಾ ಮತ್ತು ಮಂಕಿ ಬಾರ್‌ನಂತಹ 100 ರೆಸ್ಟೋರೆಂಟ್ ಪಾಲುದಾರರು ಎಲ್ಲಾ ಅನಗತ್ಯ ಲೈಟ್‌ಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ ರಾತ್ರಿ ಊಟದ ವೇಳೆ ವಿಶಿಷ್ಟವಾದ ‘ಡೈನ್ ಇನ್ ದಿ ಡಾರ್ಕ್’ ಅನುಭವ ನೀಡಲು ಬಯಸಿದ್ದಾರೆ.
ಸಿನಿಮಾ ಸ್ಟೋರಿಯಂತಿದೆ ಈ ಗ್ಯಾಂಗ್ ಸ್ಟರ್ ಬಂಧನದ ಕಥೆ…!
ಫುಡ್ ಡೆಲಿವರಿ ದೈತ್ಯ ಮತ್ತು ರೆಸ್ಟೋರೆಂಟ್ ವಿಮರ್ಶೆ ವೇದಿಕೆ ಝೊಮಾಟೊ ತನ್ನ ಪಾಲುದಾರರು ಹಾಗೂ ಸರಿಸುಮಾರು 36.4 ಮಿಲಿಯನ್ ಬಳಕೆದಾರರಲ್ಲಿ ಅರ್ಥ್ ಅವರ್ ಬಗ್ಗೆ ಜಾಗೃತಿ ಮೂಡಿಸಲು ಡಬ್ಲ್ಯು ಡಬ್ಲ್ಯು ಎಫ್ ಇಂಡಿಯಾದೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ.
ಪ್ರಮುಖ ರೆಸ್ಟೋರೆಂಟ್‌ಗಳು ರಾತ್ರಿಯ ಊಟದ ಸಮಯದಲ್ಲಿ ಅನಿವಾರ್ಯವಲ್ಲದ ದೀಪಗಳನ್ನು ಆಫ್ ಮಾಡುತ್ತವೆಯಂತೆ. ಇದಲ್ಲದೆ, ಝೋಮೆಟೊ ತನ್ನ ಎಲ್ಲಾ ಉದ್ಯೋಗಿಗಳು ತಮ್ಮ ಮನೆಗಳಲ್ಲಿ ಅರ್ಥ್ ಅವರ್ ಆಚರಿಸಲು ಪ್ರೋತ್ಸಾಹಿಸುತ್ತಿದೆ. ಅರ್ಥ್ ಅವರ್ ಅಭಿಯಾನವು ರಾತ್ರಿ 8ರಿಂದ ಒಂದು ತಾಸು ನಡೆಯಲಿದೆ.