ಮಾರಿಯುಪೋಲ್ನಲ್ಲಿ ಥಿಯೇಟರ್ನ ಮೇಲೆ ನಡೆದ ರಷ್ಯಾದ ಬಾಂಬ್ ದಾಳಿಯಲ್ಲಿ ಮುನ್ನೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮರಿಯುಪೋಲ್ ಸಿಟಿ ಕೌನ್ಸಿಲ್ ಪ್ರತ್ಯಕ್ಷದರ್ಶಿ ಖಾತೆಗಳಿಂದ ಈ ಭಯಾನಕ ಸುದ್ದಿ ಹೊರಬಿದ್ದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.
ದುರಾದೃಷ್ಟವಶಾತ್ ನಾವು ಈ ದಿನವನ್ನು ಕೆಟ್ಟ ಸುದ್ದಿಯೊಂದಿಗೆ ಆರಂಭಿಸುತ್ತಿದ್ದೇವೆ ಎಂದು ಮರಿಯುಪೋಲ್ ಸಿಟಿ ಕೌನ್ಸಿಲ್ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ರಷ್ಯಾ ನಡೆಸಿದ ವೈಮಾನಿಕ ದಾಳಿಯ ಪರಿಣಾಮವಾಗಿ ಮಾರಿಯುಪೋಲ್ನ ಡ್ರಾಮಾ ಥಿಯೇಟರ್ನಲ್ಲಿ ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.