ದಕ್ಷಿಣ ಚೀನಾದಲ್ಲಿ ವಿಮಾನ ಪತನಗೊಂಡು 2 ದಿನಗಳ ಬಳಿಕ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ವಾಯುಯಾನ ನಿಯಂತ್ರಕದ ಅಧಿಕಾರಿ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ 2 ಬ್ಲ್ಯಾಕ್ಬಾಕ್ಸ್ಗಳಲ್ಲಿ ಒಂದು ಪತ್ತೆಯಾಗಿದ್ದು ಇದು ತೀವ್ರವಾಗಿ ಹಾನಿಗೊಳಗಾಗಿದೆ ಎನ್ನಲಾಗಿದೆ.
ರೆಕಾರ್ಡರ್ ಎಷ್ಟು ಹಾನಿಗೊಳಗಾಗಿದೆ ಎಂದರೆ ಅದು ಫ್ಲೈಟ್ ಡೇಟಾ ರೆಕಾರ್ಡರ್ ಅಥವಾ ಕಾಕ್ಪಿಟ್ ಧ್ವನಿ ರೆಕಾರ್ಡರ್ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
ಬೋಯಿಂಗ್ 737 ಜೆಟ್ ವಿಮಾನವು ಬೆಟ್ಟದ ಮೇಲೆ ಪತನಗೊಳ್ಳುವ ಮೊದಲು ಶಬ್ದದ ವೇಗದಲ್ಲಿ ಆಕಾಶದಿಂದ ಹೇಗೆ ಧುಮುಕಿತು ಎಂಬುದನ್ನು ತಿಳಿದುಕೊಳ್ಳಲು ಈ ಬ್ಲ್ಯಾಕ್ ಬಾಕ್ಸ್ ಪ್ರಮುಖ ಅಸ್ತ್ರವಾಗಿದೆ.