ಉಕ್ರೇನ್ ಸೇರ್ಪಡೆಯನ್ನು ನ್ಯಾಟೋ ಒಪ್ಪಿಕೊಳ್ಳಬೇಕು ಅಥವಾ ರಷ್ಯಾಕ್ಕೆ ಹೆದರುತ್ತದೆ ಎಂದು ಬಹಿರಂಗವಾಗಿ ಘೋಷಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಂಗಳವಾರ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್(ನ್ಯಾಟೋ) ದ ವಿರುದ್ಧ ವಾಗ್ದಾಳಿ ನಡೆಸಿದರು. ನ್ಯಾಟೋ ಒಕ್ಕೂಟವು ಉಕ್ರೇನ್ ಸದಸ್ಯತ್ವವನ್ನು ಒಪ್ಪಿಕೊಳ್ಳಬೇಕು ಅಥವಾ ರಷ್ಯಾಕ್ಕೆ ಹೆದರುತ್ತಿದೆ ಎಂದು ಬಹಿರಂಗವಾಗಿ ಘೋಷಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
ತನ್ನ ದೇಶವು NATO ಸದಸ್ಯನಾಗಿದ್ದಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ ಎಂದು ಝೆಲೆನ್ಸ್ಕಿ ಈ ಹಿಂದೆ ಹೇಳಿದ್ದರು. ನಾವು ನ್ಯಾಟೋ ಸದಸ್ಯರಾಗಿದ್ದರೆ, ಯುದ್ಧವು ಪ್ರಾರಂಭವಾಗುತ್ತಿರಲಿಲ್ಲ. ನನ್ನ ದೇಶಕ್ಕೆ, ನನ್ನ ಜನರಿಗೆ ಭದ್ರತೆಯ ಖಾತರಿಗಳನ್ನು ಪಡೆಯಲು ನಾನು ಬಯಸುತ್ತೇನೆ. ಜನರು ಪ್ರತಿದಿನ ಸಾಯುತ್ತಿರುವ ಕಾರಣ ತಕ್ಷಣ ಅದನ್ನು ಮಾಡಲಿ ಎಂದು ಅವರು ಹೇಳಿದ್ದಾರೆ.