ಉಕ್ರೇನ್ನ ಮಾಜಿ ಸಂಸದ ಕೊಟ್ವಿಟ್ಸ್ಕಿ ಪತ್ನಿ ಸೂಟ್ಕೇಸ್ಗಳಲ್ಲಿ 28 ಮಿಲಿಯನ್ ಡಾಲರ್ ಹಾಗೂ 1.3 ಮಿಲಿಯನ್ ಯುರೋಗಳಷ್ಟು ಹಣದ ಸಮೇತ ದೇಶದಿಂದ ಪಲಾಯನ ಮಾಡಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಯುದ್ಧಪೀಡಿತ ಉಕ್ರೇನ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮಹಿಳೆಯು ಜಕರ್ಪಾಟಿಯಾ ಪ್ರಾಂತ್ಯದ ಮೂಲಕ ಹಂಗೇರಿಯನ್ನು ಪ್ರವೇಶಿಸಲು ಯತ್ನಿಸಿದಳು. ಆದರೆ ಹಂಗೇರಿಯಾ ಗಡಿ ಕಾವಲುದಾರರು ಹಣದ ಸಮೇತ ಮಹಿಳೆಯನ್ನು ಹಿಡಿದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದೆ. ಅಂದಿನಿಂದ ಇಂದಿನವರೆಗೂ ರಷ್ಯಾದ ಪಡೆ ಉಕ್ರೇನ್ನ ವಿವಿಧ ಭಾಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಲೇ ಇದೆ.