ದಾವಣಗೆರೆ: ರಷ್ಯಾ ದಾಳಿಯಲ್ಲಿ ರಾಜ್ಯದ ಮೆಡಿಕಲ್ ವಿದ್ಯಾರ್ಥಿ ನವೀನ್ ನನ್ನು ಕಳೆದುಕೊಂಡಿರುವುದು ನಮ್ಮ ದುರ್ದೈವ. ಯುದ್ಧದ ಸಂದರ್ಭದಲ್ಲಿ ನವೀನ್ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಉದಾಹರಣೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಿಎಂ, ಮೋದಿಯವರ ಭಗೀರಥ ಪ್ರಯತ್ನದಿಂದ ಇಂದು ನವೀನ್ ಮೃತದೇಹ ಸ್ವಗ್ರಾಮಕ್ಕೆ ತರಲಾಗಿದೆ. ಯುದ್ಧದ ವೇಳೆ ಅಲ್ಲಿನ ದೇಶದ ಸಹಕಾರ ಪಡೆಯುವುದು ಸುಲಭವಾಗಿರಲಿಲ್ಲ. ಭಾರತದ ಧ್ವಜ ಹಿಡಿದರೆ ಸಾಕು ಬಿಟ್ಟು ಕಳುಹಿಸಿದ್ದಾರೆ. ಪ್ರಧಾನಿ ಮೋದಿ ವರ್ಚಸ್ಸಿಗೆ ಇದು ಉದಾಹರಣೆ. ಅಮೆರಿಕಾ ಕೂಡ ತನ್ನ ನಾಗರಿಕರನ್ನು ಕೈ ಬಿಟ್ಟಿದೆ. ಆದರೆ ಭಾರತ ತನ್ನ ನಾಗರಿಕರನ್ನು ಕೈಬಿಟ್ಟಿಲ್ಲ ಎಂದು ಹೇಳಿದರು.
ಶುಭ ಸುದ್ದಿ ಹಂಚಿಕೊಂಡ ಬಾಲಿವುಡ್ ನಟಿ ಸೋನಂ ಕಪೂರ್…..!
ವಿದೇಶಾಂಗ ಸಚಿವರು, ರಾಯಭಾರ ಅಧಿಕಾರಿಗಳ ಜತೆ ನಾವು ಸಂಪರ್ಕದಲ್ಲಿದ್ದೆವು, ಘಟನೆ ಬಳಿಕ ನವೀನ್ ಮೃತದೇಹ ಸಂರಕ್ಷಿಸಲಾಗಿತ್ತು. ಎಲ್ಲರ ಸಹಕಾರದಿಂದ ಇಂದು ನವೀನ್ ಮೃತದೇಹ ಸ್ವಗ್ರಾಮ ಚಳಗೇರಿಗೆ ತಲುಪಿದೆ ಎಂದರು.
ಇದೇ ವೇಳೆ ಉಕ್ರೇನ್ ನಿಂದ ವಾಪಸ್ ಆದ ವಿದ್ಯಾರ್ಥಿಗಳ ಮೆಡಿಕಲ್ ಕೌನ್ಸಿಲ್ ಗೆ ಚಿಂತನೆ ನಡೆಸಲಾಗಿದೆ. ಅಲ್ಲಿ ಕೋರ್ಸ್ ಮುಗಿದರೂ ಇಲ್ಲಿ ಮತ್ತೆ ಎಕ್ಸಾಂ ಬರೆಯಬೇಕು. ಎಲ್ಲಾ ರಾಜ್ಯಗಳಲ್ಲಿಯೂ ಉಕ್ರೇನ್ ನಿಂದ ಬಂದವರಿದ್ದಾರೆ. ನಮ್ಮಲ್ಲಿ ಖಾಸಗಿ ವಲಯದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗುತ್ತಿದೆ. ರಾಜ್ಯದಲ್ಲಿ A,B,C ಕೆಟಗರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.