alex Certify BIG NEWS; ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು; ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು; ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ತ್ರಿಸದಸ್ಯ ಪೀಠ ಸಮವಸ್ತ್ರ ಕುರಿತ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು ಗಮನ ಸೆಳೆದಿವೆ.

ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ ಹಿಜಾಬ್ ವಿವಾದ ಕುರಿತು 129 ಪುಟಗಳ ಸುದೀರ್ಘ ತೀರ್ಪು ನೀಡಿದ್ದು, ಅದರಲ್ಲಿ ಹಲವು ಅಂಶಗಳನ್ನು ಉಲ್ಲೇಖ ಮಾಡಿದೆ.

* ಹಿಜಾಬ್ ಇತಿಹಾಸ ತುಂಬಾ ಸಂಕೀರ್ಣವಾಗಿದ್ದು, ಕಾಲಾಂತರದಲ್ಲಿ ಧರ್ಮ ಹಾಗೂ ಸಾಂಸ್ಕೃತಿಕ ಪ್ರಭಾವವನ್ನು ಒಳಗೊಂಡಿದೆ. ಧಾರ್ಮಿಕ ನಂಬಿಕೆಗಳನ್ನು ಒಪ್ಪುವ ಹಾಗೂ ಒಪ್ಪದಿರುವ ಅಂಶಗಳನ್ನು ಎತ್ತಿ ತೋರಿಸುವುದು ಸೇರಿದಂತೆ ಹಲವು ಸಂಕೀರ್ಣತೆಯನ್ನು ಒಳಗೊಂಡಿದೆ.

ಆಪ್​​ ತೊರೆದು ಬಿಜೆಪಿಗೆ ಸೇರಿದ್ದ ಕೌನ್ಸಿಲರ್​ ಆಮ್​ ಆದ್ಮಿ ಪಕ್ಷಕ್ಕೆ ವಾಪಸ್​​

* ಹಿಜಾಬ್ ಇಸ್ಲಾಂ ನ ಅವಿಭಾಜ್ಯ ಅಂಗವೇ? ಸಾಂವಿಧಾನಿಕ ಹಕ್ಕೆ? ಸಮವಸ್ತ್ರ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿವೆಯೇ? ಸಮವಸ್ತ್ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆಯೇ? ಎನ್ನುವ ಪ್ರಶ್ನೆಗಳನ್ನು ನ್ಯಾಯಾಲಯ ಪರಿಗಣಿಸಿದೆ. ಧಾರ್ಮಿಕ ಬದುಕನ್ನು ಸಾಮಾಜಿಕ ಬದುಕಿನಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ಮಾತನ್ನು ನ್ಯಾಯಾಲಯ ಉಲ್ಲೇಖಿಸಿದೆ.

* ಭಾರತದಲ್ಲಿ ಹುಟ್ಟಿನಿಂದ ಸಾವಿನವರೆಗೂ ಎಲ್ಲವನ್ನೂ ಧರ್ಮ ಆವರಿಸಿಕೊಂಡಿದೆ. ಹೀಗಾಗಿ ಧರ್ಮದ ವ್ಯಾಖ್ಯಾನ ಸೀಮಿತಗೊಳಿಸುವ ಅಗತ್ಯವಿದೆ. ಎಲ್ಲ ನಂಬಿಕೆ ಹಾಗೂ ರಿವಾಜುಗಳನ್ನು ಧರ್ಮದ ಭಾಗ ಎನ್ನಬೇಕಿಲ್ಲ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ಹೈಕೋರ್ಟ್ ಪರಿಶೀಲಿಸಿದೆ.

* ಯಾವುದೇ ವ್ಯಕ್ತಿ ಧಾರ್ಮಿಕ ಹಕ್ಕಿನ ಆಧಾರದಲ್ಲಿ ಏನನ್ನಾದರೂ ಕೋರುವಾಗ ತಾನು ಕೋರುತ್ತಿರುವ ಅಂಶಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಇದೆಯೇ ಎಂಬುದನ್ನು ಸಾಬೀತುಪಡಿಸಬೇಕು. ಹಿಜಾಬ್ ಧರಿಸುವುದು ಸಂವಿಧಾನಿಕ ಮೌಲ್ಯಕ್ಕೆ ಅನುಗುಣವಾಗಿಲ್ಲ.

* ಇಸ್ಲಾಂ ಕಾನೂನುಗಳಿಗೆ ಕುರಾನ್ ಮಾತ್ರ ಮೂಲ ಆಧಾರವಾಗಿ ಪರಿಗಣಿಸಬಹುದು. ಹಿಜಾಬ್ ಬಗ್ಗೆ ಕುರಾನ್ ನಲ್ಲಿ ಉಲ್ಲೇಖವಿಲ್ಲ. ಮುಸ್ಲೀಂ ಮಹಿಳೆಯರಿಗೆ ಹಿಜಾಬ್ ಕಡ್ಡಾಯ ಎಂದು ಕುರಾನ್ ನಲ್ಲಿ ಹೇಳಲಾಗಿಲ್ಲ. ಹಿಜಾಬ್ ಅತ್ಯಗತ್ಯ ಧಾಮಿಕ ಆಚರಣೆಯಲ್ಲ ಎಂದು ಸ್ಪಷ್ಟನೆ.

* ನಿರ್ಧಿಷ್ಟ ವಯೋಮಾನದವರೆಗೆ ಎಲ್ಲರಿಗೂ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಹಾಗಾಗಿ ಸಮವಸ್ತ್ರ ಶಿಫಾರಸು ಅಧಿಕಾರ ಸರ್ಕಾರಕ್ಕಿದೆ. ಆದರೆ ಅನಗತ್ಯ ನಿಯಮ ಹೇರುವಂತಿಲ್ಲ. ಶಾಲೆ ಮಾಡುವ ಸಮವಸ್ತ್ರ ಶಿಫಾರಸು ಧಾರ್ಮಿಕ ತಾಟಸ್ತ್ಯ ಹಾಗೂ ಸರ್ವರಿಗೂ ಅನ್ವಯವಾಗುವಂತಿದ್ದರೆ ಅದರಿಂದ ಹಕ್ಕಿನ ಉಲ್ಲಂಘನೆಯಾಗಲ್ಲ. ವಿದ್ಯಾರ್ಥಿಗಳಲ್ಲಿ ಸಹೋದರತ್ವ ಮನೋಭಾವ ಬೆಳೆಯಲು ಅವಕಾಶವಾಗುತ್ತದೆ.

* ಸರ್ಕಾರದ ಸಮವಸ್ತ್ರ ಸಂಹಿತೆ ಎಲ್ಲರೂ ಪಾಲಿಸಬೇಕು. ಶಿಕ್ಷಣ ಸಂಸ್ಥೆಯ ನಿರ್ಬಂಧಗಳು ಸಂವಿಧಾನಬದ್ಧವಾಗಿದ್ದು, ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...