40ನೇ ಮಹಡಿಯಿಂದ ಲಿಫ್ಟ್ ಕುಸಿದ ಪರಿಣಾಮ 43 ವರ್ಷದ ವ್ಯಕ್ತಿಯು ಸಾವನ್ನಪ್ಪಿದ ಘಟನೆಯು ಮುಂಬೈನ ಗ್ರಾಂಟ್ ರಸ್ತೆಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ 26 ವರ್ಷದ ಯುವಕನಿಗೆ ಗಾಯಗಳಾಗಿವೆ. ಇಬ್ಬರೂ ಲಿಫ್ಟ್ ರಿಪೇರಿ ಮಾಡುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಟ್ಟಡದ ಮಾಲೀಕ ದೇವೆನ್ ದಾನಿ, ಕಳೆದ 2 ದಿನಗಳಿಂದ ಲಿಫ್ಟ್ ಕೆಲಸ ಮಾಡುತ್ತಿರಲಿಲ್ಲ. ನಾವು 2008ರಿಂದಲೂ ಸಿಟಿ ಲಿಫ್ಟ್ ಇಂಡಿಯಾಗೆ ಲಿಫ್ಟ್ನ ನಿರ್ವಹಣಾ ಕೆಲಸವನ್ನು ನೋಡಿಕೊಳ್ಳಲು ಗುತ್ತಿಗೆ ನೀಡಿದ್ದೇವೆ. ಲಿಫ್ಟ್ 40ನೇ ಮಹಡಿಯಲ್ಲಿತ್ತು. 26 ವರ್ಷದ ಅನುಭವ್ ತ್ರಿಪಾಠಿ ಹಾಗೂ 43 ವರ್ಷದ ಸೂರ್ಯಕಾಂತ್ ಪೂಜಾರಿ ಲಿಫ್ಟ್ನಲ್ಲಿದ್ದರು. ಕೆಲ ಸಮಯದ ಬಳಿಕ ಲಿಫ್ಟ್ನಲ್ಲಿ ದೊಡ್ಡ ಶಬ್ದ ಕೇಳಿತು. ಅಷ್ಟರಲ್ಲಾಗಲೇ ಲಿಫ್ಟ್ ಕುಸಿದುಬಿದ್ದಿತ್ತು. ಇಬ್ಬರನ್ನೂ ತಕ್ಷಣವೇ ಲಿಫ್ಟ್ನಿಂದ ಹೊರತೆಗೆಯಲಾಯ್ತು. ಅನುಭವ್ಗೆ ಪ್ರಜ್ಞೆ ಇತ್ತು ಆದರೆ ಅವರಿಗೆ ತೀವ್ರ ಗಾಯಗಳಾಗಿತ್ತು. ಇತ್ತ ಸೂರ್ಯಕಾಂತ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಹೇಳಿದರು.
ಘಟನೆಯಲ್ಲಿ ಗಾಯಗೊಂಡ ತ್ರಿಪಾಠಿಯನ್ನು ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೂ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇತ್ತ ಪೂಜಾರಿಯನ್ನು ಸರ್ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರು ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.