ಕೇಂದ್ರ ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರ್ಚ್ ಬದಲಿಗೆ ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಯನ್ನು ಆರಂಭಿಸಲು ತೀರ್ಮಾನಿಸಿದೆ ಎಂದು ಕೇಂದ್ರ ಸರಕಾರದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ದೇಶದ ಬೃಹತ್ ಜೀವ ವಿಮಾ ಸಂಸ್ಥೆಯಾದ ಎಲ್‌ಐಸಿಯು ತನ್ನ ಒಟ್ಟು ಷೇರುಗಳಲ್ಲಿ ಶೇ.5 ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 61,258 ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ. ಹಾಗಾಗಿ ಐಪಿಒ ಆರಂಭಿಸುತ್ತಿದೆ.
ಆರಂಭದಲ್ಲಿ ಕೇಂದ್ರ ಸರಕಾರವು ಮಾರ್ಚ್‌ನಲ್ಲಿಯೇ ಐಪಿಒ ಆರಂಭಿಸುವ ಉದ್ದೇಶ ಹೊಂದಿತ್ತು. ಆದರೆ, ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಅಲ್ಲದೆ, ಷೇರುಗಳ ಮೌಲ್ಯವು ಕುಸಿಯುತ್ತಿದೆ. ಇದರಿಂದಾಗಿ ಕೇಂದ್ರ ಸರಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತಿಳಿದುಬಂದಿದೆ. ರಷ್ಯಾ ಸಾರಿರುವ ಯುದ್ಧವು ಹೂಡಿಕೆದಾರರ ಮೇಲೆ ಪ್ರಭಾವ ಬೀರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ ಎಂದು ಸಹ ಮೂಲಗಳು ತಿಳಿಸಿವೆ.
ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್-ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಸಿದ್ಧತೆ
ಸೆಬಿಗೆ ಭಾರತೀಯ ಜೀವ ವಿಮಾ ನಿಗಮವು ಫೆಬ್ರವರಿಯಲ್ಲಿ ದಾಖಲೆ ಸಲ್ಲಿಸಿತ್ತು. ಮಾರ್ಚ್ 13ರಂದು ಸೆಬಿಯು ಐಪಿಒಗೆ ಅನುಮತಿ ನೀಡಿತ್ತು. ಆದರೆ, ಆದಾಗ್ಯೂ, ಕೇಂದ್ರ ಸರಕಾರಕ್ಕೆ ಐಪಿಒ ಆರಂಭಿಸಲು ಮೇ 12ರವರೆಗೆ ಸಮಯ ಹೊಂದಿರುವುದರಿಂದ ಒಂದು ತಿಂಗಳು ವಿಳಂಬ ಮಾಡುತ್ತಿದೆ ಎಂದು ಸಹ ತಿಳಿದುಬಂದಿದೆ. ಅಲ್ಲದೆ, ಷೇರು ಮಾರಾಟದ ವೇಳೆ ಎಲ್‌ಐಸಿಯ ತನ್ನ ಕಂಪನಿಯ ಉದ್ಯೋಗಿಗಳು ಹಾಗೂ ಪಾಲಿಸಿದಾರರಿಗೆ ಶೇ.5 ರಷ್ಟು ಷೇರುಗಳನ್ನು ವಿಶೇಷವಾಗಿ ಮೀಸಲಿರಿಸಿದೆ.