ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದೆ. ಸಂಪೂರ್ಣ ರಣಾಂಗಣವಾಗಿರುವ ಉಕ್ರೇನ್ ನಿಂದ ವಿದೇಶಿಗರನ್ನು ಸ್ಥಳಾಂತರಿಸಲಾಗುತ್ತಿದ್ದು, ಈ ನಡುವೆ ಯುಎಸ್ ಕೂಡ ತನ್ನ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚನೆ ನೀಡಿದೆ.
ಉಕ್ರೇನ್ ಮೇಲಿನ ದಾಳಿ ಮುಂದುವರೆಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾಗೆ ಮಿಲಿಟರಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಷ್ಯಾಗೆ ಸಹಾಯ ಮಾಡಿದರೆ ಚೀನಾ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಯು ಎಸ್ ಎಚ್ಚರಿಕೆ ನೀಡಿದೆ.
ಬ್ಯಾಂಕ್ ಕ್ಯಾಶಿಯರ್ ನಿಂದಲೇ ಬ್ಯಾಂಕ್ ಗೆ ಕನ್ನ; ನಕಲಿ ಕೀ ಬಳಸಿ ಕೈಚಳಕ ತೋರಿದ್ದ ಆರೋಪಿಗಳು ಅರೆಸ್ಟ್
ಯುದ್ಧ ಆರಂಭವಾದ ನಂತರ ಮಿಲಿಟರಿ ನೆರವು ನೀಡುವಂತೆ ರಷ್ಯಾ, ಚೀನಾವನ್ನು ಕೇಳಿದೆ ಎಂದು ಅಧಿಕಾರಿಗಳು ಯು ಎಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ನಡುವೆ ಉಕ್ರೇನ್ ಹಾಗೂ ಚೀನಾ ಎರಡೂ ದೇಶಗಳಿಗೂ ಮಿಲಿಟರಿ ನೆರವು ನೀಡುವುದನ್ನು ಮೊದಲು ನಿಲ್ಲಿಸುವಂತೆ ಚೀನಾ ಹಾಗೂ ಯು ಎಸ್ ಎಲ್ಲಾ ದೇಶಗಳಿಗೆ ಕರೆ ನೀಡಿ ಒಂದು ಒಪ್ಪಂದಕ್ಕೆ ಬರಬೇಕು ಎಂದು ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್ ಪತ್ರಿಕೆ ಸಂಪಾದಕ ಹು ಕ್ಸಿಜಿನ್ ಹೇಳಿದ್ದಾರೆ.