
ಕರಾಚಿ ಟೆಸ್ಟ್ ಗೂ ಮುನ್ನ ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರು ದಾಲ್ ಮತ್ತು ರೊಟ್ಟಿಯನ್ನು ಆನಂದಿಸುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಕ್ರಿಕೆಟಿಗ ಊಟವನ್ನು ಬಹಳ ರುಚಿಕರವಾಗಿದೆ ಎಂದು ಬರೆದಿದ್ದಾರೆ. ಆದರೂ ಟ್ವಿಟರ್ ಬಳಕೆದಾರರು ಇದರಿಂದ ಪ್ರಭಾವಿತರಾಂದತೆ ಕಂಡಿಲ್ಲ. ಅನೇಕ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಟ್ರೋಲ್ ಮಾಡಿದ್ದಾರೆ.
ಒಬ್ಬ ಖೈದಿ ಕೂಡ ಭಾರತದಲ್ಲಿ ಇದಕ್ಕಿಂತ ಉತ್ತಮ ಗುಣಮಟ್ಟದ ಊಟವನ್ನು ಪಡೆಯುತ್ತಾನೆ. ಆದರೆ, ನೀವು ಪಾಕಿಸ್ತಾನದಲ್ಲಿ ಅತಿಥಿಯಾಗಿದ್ದೀರಿ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಅಯ್ಯೋ ಮನೆ ನೆನಪಾಗ್ತಿದೆ ಎಂಬಂತಹ ಟ್ರೋಲ್ ಗಳನ್ನು ಕೂಡ ಮಾಡಲಾಗಿದೆ. ಕ್ರಿಕೆಟ್ ಪ್ರೇಮಿಗಳು ಪಿಸಿಬಿಯನ್ನು ಗೋಳು ಹೊಯ್ದದ್ದಂತೂ ಸುಳ್ಳಲ್ಲ.
1998ರ ನಂತರ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸದಲ್ಲಿದ್ದು, ಭದ್ರತಾ ಭಯದ ಹಿನ್ನೆಲೆಯಲ್ಲಿ ಭೇಟಿ ನೀಡಲು ನಿರಾಕರಿಸಿತ್ತು.
https://twitter.com/haidermaqbool7/status/1502339130432253952?ref_src=twsrc%5Etfw%7Ctwcamp%5Etweetembed%7Ctwterm%5E1502339130432253952%7Ctwgr%5E%7Ctwcon%5Es1_&ref_url=https%3A%2F%2Fsports.ndtv.com%2Fcricket%2Fpakistan-vs-australia-twitter-trolls-pakistan-cricket-board-over-marnus-labuschagnes-daal-and-roti-pic-2818624