‘ಉಕ್ರೇನ್ನಿಂದ ವಾಪಸ್ಸಾದವನು ನನ್ನ ಪುತ್ರನಲ್ಲ, ಮೋದಿ ಪುತ್ರ’: ಭಾವುಕ ತಂದೆಯ ನುಡಿ 12-03-2022 3:36PM IST / No Comments / Posted In: Latest News, India, Live News ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರದ ದಿಟ್ಟ ನಡೆಗೆ ಸಾಕಷ್ಟು ಪ್ರಶಂಸೆಗಳು ಕೇಳಿ ಬರುತ್ತಿವೆ. ಅದೇ ರೀತಿ ಕಾಶ್ಮೀರದ ಸಂಜಯ್ ಪಂಡಿತ್ ಎಂಬವರು ಉಕ್ರೇನ್ನಲ್ಲಿ ಸಿಲುಕಿದ್ದ ತಮ್ಮ ಮಗನನ್ನು ಮಡಿಲಿಗೆ ಸೇರಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಉಕ್ರೇನ್ನಿಂದ ಮರಳಿ ಬಂದಿರುವುದು ಮೋದಿಯ ಮಗನೇ ಹೊರತು ನನ್ನ ಮಗನಲ್ಲ ಎಂದು ನಾನು ಹೇಳಬಯಸುತ್ತೇನೆ. ಯುದ್ಧಪೀಡಿತ ಉಕ್ರೇನ್ನಿಂದ ಮಗ ಮರಳುತ್ತಾನೆ ಎಂಬ ಭರವಸೆ ನಮಗಿರಲಿಲ್ಲ ಎಂದು ಹೇಳುತ್ತಾ ಸಂಜಯ್ ಪಂಡಿತ್ ಭಾವುಕರಾದರು. ಸುಮಿಯಲ್ಲಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಮಗೆ ಯಾವುದೇ ಭರವಸೆ ಇರಲಿಲ್ಲ. ಆದರೆ ಅಂತಹ ಸ್ಥಳದಿಂದ ನನ್ನ ಮಗನನ್ನು ಸುರಕ್ಷಿತವಾಗಿ ತಲುಪಿಸಿದ ಕೇಂದ್ರ ಸರ್ಕಾರಕ್ಕೆ ನಾನು ಕೃತಜ್ಞ ಎಂದು ಸಂಜಯ್ ಪಂಡಿತ್ ಹೇಳಿದರು. ವಿದ್ಯಾರ್ಥಿಗಳು ದೆಹಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಐದಾರು ಗಂಟೆಗಳಿಂದ ಮಕ್ಕಳ ಆಗಮನಕ್ಕಾಗಿ ಅಲ್ಲೇ ಕಾಯುತ್ತಿದ್ದ ಪೋಷಕರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುವ ದೃಶ್ಯಗಳು ಮನ ಕಲಕುವಂತಿವೆ. #WATCH A tearful Sanjay Pandita from Srinagar, Kashmir welcomes his son Dhruv on his return from Sumy, #Ukraine, says, "I want to say that it's Modiji's son who has returned, not my son. We had no hopes given the circumstances in Sumy. I am thankful to GoI for evacuating my son." pic.twitter.com/ygqOVk5PGm — ANI (@ANI) March 11, 2022