ಇತ್ತೀಚೆಗಷ್ಟೇ ಮುಕ್ತಾಯವಾದ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರದ ಹಾದಿ ಹಿಡಿದಿರುವ ಬಿಜೆಪಿ ಸಾರಥ್ಯದ ಎನ್ಡಿಎ ಮೈತ್ರಿಕೂಟ ಇದೀಗ ಒಟ್ಟಾರೆ 17 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ದೇಶದ 44%ದಷ್ಟು ಭೂಪ್ರದೇಶ ಹಾಗೂ 49.6% ಜನಸಂಖ್ಯೆಯನ್ನು ಈ ವ್ಯಾಪ್ತಿ ಒಳಗೊಂಡಿದೆ.
ಮಾರ್ಚ್ 2018ರಲ್ಲಿ ತನ್ನ ಸಾರ್ವಕಾಲಿಕ ಶ್ರೇಷ್ಠ ಮಟ್ಟದಲ್ಲಿದ್ದ ಬಿಜೆಪಿ+ ಕೂಟ ಆ ವೇಳೆ 21 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ದೇಶದ 70%ರಷ್ಟು ಜನಸಂಖ್ಯೆ ಹಾಗೂ 76% ಭೂಪ್ರದೇಶವನ್ನು ವ್ಯಾಪಿಸಿತ್ತು.
ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿ, ತನ್ನ ಪ್ರಧಾನಿ ಅಭ್ಯರ್ಥಿ ಎಂದು ನರೇಂದ್ರ ಮೋದಿರನ್ನು 2013ರಲ್ಲಿ ಮುನ್ನೆಲೆಗೆ ಕರೆತಂದ ಬಳಿಕ ಬಿಜೆಪಿಯ ನಾಗಾಲೋಟ ಹೀಗೆ ಸಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಆರಂಭಗೊಂಡ ಬಿಜೆಪಿಯ ಈ ನಾಗಾಲೋಟ, ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ ಮಾಡುತ್ತಾ, ರಾಜ್ಯದಿಂದ ರಾಜ್ಯಗಳನ್ನು ಗೆಲ್ಲುತ್ತಾ ಸಾಗಿದೆ.
ಕಾಟನ್ ಕ್ಯಾಂಡಿ ಬಳಸಿ ಮಹಿಳೆಯಿಂದ ಮ್ಯಾಗಿ ಖಾದ್ಯ ತಯಾರಿ…!
2018ರಲ್ಲಿ ಕೆಲವೊಂದು ರಾಜ್ಯಗಳ ಅಧಿಕಾರ ಕಳೆದುಕೊಂಡರೂ ಸಹ ಎನ್ಡಿಎ ಕೇಂದ್ರದಲ್ಲಿ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಮುಂದುವರೆದಿದೆ.
ಈಶಾನ್ಯದಲ್ಲಿ ಕೆಲವೊಂದು ರಾಜ್ಯಗಳಲ್ಲಿ ತನ್ನ ಹಿಡಿತ ಕಳೆದುಕೊಂಡಿದ್ದ ಬಿಜೆಪಿ, 2018ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲೂ ಸಹ ಬಹುಮತ ಪಡೆಯಲು ವಿಫಲವಾಗಿತ್ತು. ಅದೇ ವರ್ಷದ ಅಂತ್ಯದ ವೇಳೆಗೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಘಡಗಳಲ್ಲೂ ಸಹ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು.
ಹೈದರಾಬಾದ್ ಮನೆಗೆ ನುಗ್ಗಿದ ಕಳ್ಳನ ಸುಳಿವನ್ನು ಅಮೆರಿಕದಿಂದಲೇ ಪೊಲೀಸರಿಗೆ ಮುಟ್ಟಿಸಿದ ಮಾಲೀಕ…!
ಶಾಸಕರ ಪಕ್ಷಾಂತರದ ಬಲದಿಂದ ಕರ್ನಾಟಕ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿ ಬಂದಿದೆ. ಇದೇ ವೇಳೆ ಅಧಿಕಾರ ವಿರೋಧಿ ಅಲೆಯ ಕಾರಣದಿಂದಲೂ ಸಹ ಬಿಜೆಪಿ ಕೆಲವೊಂದು ರಾಜ್ಯಗಳಲ್ಲಿ ಸೋಲು ಕಂಡು ಬಂದಿದೆ.