
ಸೋಶಿಯಲ್ ಮೀಡಿಯಾದಲ್ಲಂತೂ ಕಾರ್ತಿಕ್ ಆರ್ಯನ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅಭಿಮಾನಿಗಳ ಕಮೆಂಟ್ಗಳಿಗೆ ಕಾರ್ತಿಕ್ ಆರ್ಯನ್ ತುಂಬಾ ಚೆನ್ನಾಗಿ ಪ್ರತಿಕ್ರಿಯೆನ್ನೂ ನೀಡುತ್ತಾರೆ.
ಇದೇ ರೀತಿ ಕಮೆಂಟ್ ಬಾಕ್ಸಿನಲ್ಲಿ ಯುವತಿಯೊಬ್ಬರು ತನ್ನನ್ನು ಮದುವೆಯಾದರೆ ನಿಮಗೆ 20 ಕೋಟಿ ರೂಪಾಯಿಗಳನ್ನು ನೀಡುತ್ತೇನೆ ಎಂದು ಕಾರ್ತಿಕ್ ಆರ್ಯನ್ಗೆ ಆಫರ್ ನೀಡಿದ್ದಾರೆ. ಇದಕ್ಕೆ ಕಾರ್ತಿಕ್ ಆರ್ಯನ್ ಯಾವಾಗ ಎಂದು ರಿಪ್ಲೈ ಮಾಡುತ್ತಾ ನಗುವ ಇಮೋಜಿಯನ್ನು ಹಾಕಿದ್ದಾರೆ.
ಕಾರ್ತಿಕ್ ಆರ್ಯನ್ ನೆಟ್ಫ್ಲಿಕ್ಸ್ನಲ್ಲಿ ಇತ್ತೀಚಿಗೆ ತೆರೆಕಂಡ ಧಮಾಕಾ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಪತ್ರಕರ್ತನ ಪಾತ್ರವನ್ನು ನಿರ್ವಹಿಸಿದ್ದಾರೆ.