ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣಗಳ ನಡುವೆಯೇ ಕೀವ್ನಲ್ಲಿ ಅಂಗಡಿಗಳನ್ನು ಲೂಟಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗೆ ಶಿಕ್ಷೆಯ ರೂಪದಲ್ಲಿ ಆತನನ್ನು ಕರೆಂಟ್ ಕಂಬಕ್ಕೆ ಕಟ್ಟಿ ಆತನ ಪ್ಯಾಂಟ್ನ್ನು ಮೊಣಕಾಲಿನವರೆಗೆ ಎಳೆಯಲಾಗಿದ್ದು ಈ ಫೊಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ರಷ್ಯಾವು ಉಕ್ರೇನ್ನ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್ನಲ್ಲಿ ಲೂಟಿ ಪ್ರಕರಣಗಳು ಹೆಚ್ಚುತ್ತಿದೆ. ಸೂಪರ್ ಮಾರ್ಕೆಟ್ಗಳು, ಪೆಟ್ರೋಲ್ ಬಂಕ್ಗಳು ಹಾಗೂ ಬ್ಯಾಂಕುಗಳನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗುತ್ತಿದೆ.
ಮತ್ತೊಂದು ಫೋಟೋದಲ್ಲಿ ವ್ಯಕ್ತಿಯೊಬ್ಬ ಈ ರೀತಿ ಕರೆಂಟ್ ಕಂಬಕ್ಕೆ ಕಟ್ಟಿ ಹಾಕಲಾಗಿದ್ದ ಲೂಟಿಕೋರನೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಈಗಾಗಲೇ ಯುದ್ಧದಿಂದ ಧ್ವಂಸಗೊಂಡಿರುವ ದೇಶದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವವರನ್ನು ಅವಮಾನಿಸಲು ಹಾಗೂ ಶಿಕ್ಷಿಸಲು ಉಕ್ರೇನಿಯನ್ನರು ಆಯ್ಕೆ ಮಾಡಿಕೊಂಡ ಮಾರ್ಗ ಇದಾಗಿದೆ.