ಸಧ್ಯ ಮೇಕೆದಾಟು ಯೋಜನೆ ಬಗ್ಗೆ ಎಲ್ಲೆಡೆ ಚರ್ಚೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ಸಿಎಂ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಮೊದಲಿನಿಂದಲೂ ಮೇಕೆದಾಟು ಯೋಜನೆಯನ್ನು ವಿರೋಧಿಸಿತ್ತಿರುವ ನಟ ಚೇತನ್ ಅಹಿಂಸಾ ರಾಜಕೀಯ ಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಎರಡು ತಿಂಗಳ ಹಿಂದೆಯೇ ಮೇಕೆದಾಟು ಅಣೆಕಟ್ಟಿನಿಂದ ಆಗುವ ತೊಂದರೆಗಳ ಬಗ್ಗೆ ಮೇಧಾ ಪಾಟ್ಕರ್ ತಿಳಿಸಿದ್ದಾರೆ. ಕಾರ್ಮಿಕರು, ರೈತರು ಮೇಕೆದಾಟು ಪರ ನಿಂತಿರುವುದು ಒಳ್ಳೆಯದು. ಆದರೆ ಈ ಅಣೆಕಟ್ಟು ಯೋಜನೆಯಿಂದ ಶ್ರಮ ಜೀವಿಗಳಿಗೆ ಸಮಸ್ಯೆ ಆಗಲಿದೆ, ಅವರು ತಮ್ಮ ಜಮೀನುಗಳನ್ನ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ.
ಈ ವೇಳೆ ರಾಜಕೀಯ ಪಕ್ಷಗಳ ವಿರುದ್ಧ ಮಾತನಾಡಿದ ಅವರು, ನೀರು ಭಾವನಾತ್ಮಕ ವಿಚಾರ ಹೌದು, ಮಹಿಳೆಯರು, ರೈತರು ನೀರನ್ನ ಅವಲಂಬಿಸಿದ್ದಾರೆ. ಆದ್ರೆ ನೀರಿನ ವಿಚಾರ ಇಟ್ಕೊಂಡು ರಾಜಕಾರಣಿಗಳು ಆಟ ಆಡ್ತಾರೆ. ರಾಜಕಾರಣಿಗಳು ಮೈಲೇಜ್ ತೆಗೆದುಕೊಳ್ಳೋದಕ್ಕೆ ಈ ಸೂಕ್ಷ್ಮ ಅಂಶಗಳನ್ನ ಬಳಸಿಕೊಳ್ತಾರೆ. ಮೂರು ಪಕ್ಷದವರು ಸೇರಿ ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIG NEWS: ನಾನು ಮಾಡಿದ ಕೆಲಸವನ್ನು ಮಾಡಿಲ್ಲ ಅಂದ್ರೆ ಸುಮ್ಮನಿರಲ್ಲ; ಕ್ರೆಡಿಟ್ ಗಾಗಿ ನಾನು ಕ್ಷೇತ್ರದ ಕೆಲಸ ಮಾಡ್ತಿಲ್ಲ; ಮತ್ತೆ ಗುಡುಗಿದ ಸಂಸದೆ ಸುಮಲತಾ
ಸಿಎಂ ಈ ವಿಚಾರವಾಗಿ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಆ ಸಭೆಗೆ ಪರಿಸರ ತಜ್ಞರು, ಹೋರಾಟಗಾರರನ್ನೂ ಕರೆಯಬೇಕು. ಅಣೆಕಟ್ಟು ಕಟ್ಟುವುದರಿಂದ ಆಗುವ ಸಮಸ್ಯೆಗಳು ಎಷ್ಟಿವೆ ಎಂಬುದನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯಬೇಕು. ರಾಜ್ಯದಲ್ಲಿ ಅಂತರ್ಜಲ, ಮಳೆ ನೀರು ಶೇಖರಣೆ, ರಿಸೈಕಲ್ ವಾಟರ್ ಸಿಸ್ಟಮ್, ವಾಟರ್ ಲೀಕೇಜ್ ನಂತಹ ಹಲವು ಸಮಸ್ಯೆಗಳಿವೆ, ಅವುಗಳನ್ನ ಮೊದಲು ಬಗೆಹರಿಸಬೇಕು ಎಂದಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ನಿಲುವಿನ ಬಗ್ಗೆ ಮಾಹಿತಿ ನೀಡಿದ ಚೇತನ್, ನೀರಿನ ಉಳಿವಿನ ಬಗ್ಗೆ , ಈ ಹೋರಾಟದ ಬಗ್ಗೆ ನಮ್ಮ ತಂಡ ಸಿಎಂ ಬಳಿ ಚರ್ಚೆ ನಡೆಸುತ್ತದೆ ಎಂದಿದ್ದಾರೆ. ಇದೇ ವೇಳೆ ಕರ್ನಾಟಕ ಸರ್ಕಾರದ ವಿರುದ್ಧ ಮತ್ತೊಂದ ಆರೋಪ ಮಾಡಿರುವ ಅವರು, ಮೊದಲು 13 ಸಾವಿರ ಕೋಟಿ ಇದ್ದ ಎತ್ತಿನ ಹೊಳೆ ಯೋಜನೆ ಈಗ 23 ಸಾವಿರಕ್ಕೆ ಹೋಗಿದೆ. ಇದು ಕಿಕ್ ಬ್ಯಾಕ್ ಪಡೆಯುವ ಪ್ಲಾನ್ ಎಂದಿದ್ದಾರೆ.