ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದ ರಾಫೆಲ್ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್ಪಾಟ್ ಹೊಡೆದಿದೆ.
ಕಳೆದ 24 ವರ್ಷಗಳಿಂದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿರುವ ಸೈದಾಲಿ ಕಣ್ಣನ್ 1998ರಲ್ಲಿ ಮೊದಲ ಬಾರಿಗೆ ನಗದು ಬಹುಮಾನವನ್ನು ಗೆದ್ದಿದ್ದರು. ಇದಾದ ಬಳಿಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ಕಣ್ಣನ್ ಕೊನೆಗೂ 2022ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಣ್ಣನ್ ಟಿಕೆಟ್ ಖರೀದಿಸಲು ಸಹಾಯ ಮಾಡಿದ ಸ್ನೇಹಿತರ ಗುಂಪಿನೊಂದಿಗೆ ಈ ಬಹುಮಾನದ ಮೊತ್ತವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಕಣ್ಣನ್ ಫೆಬ್ರವರಿ 22ರಂದು ಈ ವಿಜೇತ ಲಾಟರಿ ಟಿಕೆಟ್ನ್ನು ಖರೀದಿಸಿದ್ದರು.
ಕಣ್ಣನ್ರ ಮತ್ತೊಬ್ಬ ಸ್ನೇಹಿತ ಕೂಡ ಕಣ್ಣನ್ ಜೊತೆಯಲ್ಲಿ ದಶಕಗಳಿಂದ ಟಿಕೆಟ್ ಖರೀದಿಸುತ್ತಿದ್ದು ಇದೀಗ ಕಣ್ಣನ್ ಇವರಿಗೂ ಕೂಡ ಹಣದಲ್ಲಿ ಪಾಲು ನೀಡಲಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಕಣ್ಣನ್ ಸ್ನೇಹಿತ ಮಜೀದ್, ನಾನು ಕೂಡ ಕಳೆದ 20 ವರ್ಷಗಳಿಂದ ಸೈದಾಲಿ ಜೊತೆಯಲ್ಲಿ ಟಿಕೆಟ್ ಖರೀದಿಸುತ್ತಿದ್ದೇನೆ, ಸೈದಾಲಿ ನಿಜಕ್ಕೂ ಅದೃಷ್ಟವಂತ. ಆತನ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ ಎಂದು ಹೇಳಿದರು.