ಪ್ರತಿವರ್ಷ ಆದಾಯ ತೆರಿಗೆ ಪಾವತಿಸುವ ಸಮಯ ಬರ್ತಿದ್ದಂತೆ ಅನೇಕರು ತೆರಿಗೆಯಲ್ಲಿ ಹಣ ಉಳಿಸಲು ವಿಧಾನಗಳನ್ನು ಹುಡುಕುತ್ತಾರೆ. ಟ್ಯಾಕ್ಸ್ ಉಳಿತಾಯಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಹೂಡಿಕೆ ಯೋಜನೆಗಳಿವೆ. ಆದ್ರೆ ಸೂಕ್ತವಾದುದನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.
2006ರ ಎಸ್ ಬಿ ಐ ತೆರಿಗೆ ಉಳಿತಾಯ ಯೋಜನೆ ಇವುಗಳಲ್ಲೊಂದು. ಈ ಯೋಜನೆ ಕನಿಷ್ಠ 5 ವರ್ಷ ಮತ್ತು ಗರಿಷ್ಠ 10 ವರ್ಷಗಳ ಅವಧಿಯನ್ನು ಹೊಂದಿದೆ. ಹೂಡಿಕೆದಾರ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬೇಕು. ಹೂಡಿಕೆಯ ಮಿತಿ ವರ್ಷಕ್ಕೆ 1.5 ಲಕ್ಷ ರೂಪಾಯಿ ಮೀರುವಂತಿಲ್ಲ.
ಬಡ್ಡಿದರ: ಈ ತೆರಿಗೆ ಉಳಿತಾಯ ಯೋಜನೆಯ ಬಡ್ಡಿ ದರವು, ಫಿಕ್ಸೆಡ್ ಡೆಪಾಸಿಟ್ ನ ಬಡ್ಡಿ ದರಕ್ಕೆ ಸರಿಸಮನಾಗಿರುತ್ತದೆ. 5 ರಿಂದ 15 ವರ್ಷಗಳೊಳಗೆ ಮೆಚ್ಯೂರಿಟಿ ಹೊಂದುವ ಎಸ್ ಬಿ ಐ ಎಫ್.ಡಿ. ಮೇಲೆ ಗ್ರಾಹಕರಿಗೆ ಶೇ. 5.5 ರಷ್ಟು ಬಡ್ಡಿ ನೀಡಲಾಗುತ್ತಿದೆ.
ನಿಯಮಗಳು: ಈ ಯೋಜನೆಯ ಅಡಿಯಲ್ಲಿ 5 ವರ್ಷಗಳೊಳಗೆ ಖಾತೆಯನ್ನು ಹಿಂಪಡೆಯುವಂತಿಲ್ಲ. ಠೇವಣಿದಾರರು ತಮ್ಮ ಖಾತೆಗೆ ತಮ್ಮನ್ನೇ ನಾಮಿನೇಟ್ ಮಾಡಬಹುದು.
ತೆರಿಗೆ ವಿನಾಯಿತಿ : ಈ ಯೋಜನೆಯಲ್ಲಿ 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತದೆ. ಟಿಡಿಎಸ್ ಅನ್ನು ಪ್ರಮಾಣಿತ ದರದಲ್ಲಿ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಡಿತದಿಂದ ವಿನಾಯಿತಿ ಪಡೆಯಲು ಠೇವಣಿದಾರರು ಫಾರ್ಮ್ 15G/15H ಅನ್ನು ಸಲ್ಲಿಸಬಹುದು.
ಅರ್ಹತೆ : ಯಾವುದೇ ಸ್ಥಳೀಯ ಭಾರತೀಯರು ಒಬ್ಬ ವ್ಯಕ್ತಿಯಾಗಿ ಅಥವಾ ಹಿಂದೂ ಅವಿಭಜಿತ ಕುಟುಂಬದ ಸದಸ್ಯನಾಗಿ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ ಶಾಶ್ವತ ಖಾತೆ ಸಂಖ್ಯೆ (PAN) ಹೊಂದಿರಬೇಕು. ಜಂಟಿ ಖಾತೆಯನ್ನು ಇಬ್ಬರಿಗೆ ಕೊಡಲಾಗುತ್ತದೆ. ಓರ್ವ ವಯಸ್ಕ ಮತ್ತೋರ್ವ ಅಪ್ರಾಪ್ತನಿರಬಹುದು.