alex Certify SHOCKING: ವೃದ್ಧೆಯ ಕಣ್ಣಿಗೆ ಹಾರ್ಪಿಕ್​, ಜಂಡು ಬಾಮ್​​ ಹಾಕಿ ಕುರುಡಾಗಿಸಿದ ಪಾಪಿ ಮಹಿಳೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವೃದ್ಧೆಯ ಕಣ್ಣಿಗೆ ಹಾರ್ಪಿಕ್​, ಜಂಡು ಬಾಮ್​​ ಹಾಕಿ ಕುರುಡಾಗಿಸಿದ ಪಾಪಿ ಮಹಿಳೆ…..!

ತಾನು ನೋಡಿಕೊಳ್ಳುತ್ತಿದ್ದ ವೃದ್ಧೆಯ ಕಣ್ಣಿಗೆ ಹಾರ್ಪಿಕ್​ ಹಾಗೂ ಜಂಡುಬಾಮ್​ ಮಿಕ್ಸ್​ ಮಾಡಿ ಹಾಕುವ ಮೂಲಕ 32 ವರ್ಷದ ಕೇರ್​ ಟೇಕರ್​ ವೃದ್ಧೆಯ ಕಣ್ಣನ್ನು ಕುರುಡಾಗಿಸಿದ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.

ವೃದ್ಧೆಯ ಬಳಿ ಇದ್ದ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ ಆರೋಪಿ ಭಾರ್ಗವಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

73 ವರ್ಷದ ವೃದ್ಧೆ ಹೇಮಾವತಿ ಸಿಕಂದರಾಬಾದ್​ನ ನಾಚರಂನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. 2001ರ ಆಗಸ್ಟ್​ ತಿಂಗಳಲ್ಲಿ ಲಂಡನ್​ನಲ್ಲಿ ನೆಲೆಸಿರುವ ಹೇಮಾವತಿ ಪುತ್ರ ಶಶಿಧರ್​ ಹೇಮಾವತಿಯನ್ನು ನೋಡಿಕೊಳ್ಳಲು ಭಾರ್ಗವಿಯನ್ನು ನೇಮಿಸಿದರು. ಬಳಿಕ ಭಾರ್ಗವಿ ತನ್ನ ಏಳು ವರ್ಷದ ಮಗನೊಂದಿಗೆ ಹೇಮಾವತಿಯಿದ್ದ ಫ್ಲ್ಯಾಟ್​ಗೆ ತೆರಳಿದರು.

ವೃದ್ಧೆಯ ಕಣ್ಣಿನಲ್ಲಿ ದೋಷವಿದೆ ಎಂಬುದನ್ನು ಅರಿತಿದ್ದ ಭಾರ್ಗವಿ ಅವರ ಕಣ್ಣಿಗೆ ಡ್ರಾಪ್ಸ್​ ಹಾಕುವ ನೆಪದಲ್ಲಿ ಕಣ್ಣಿಗೆ ಹಾರ್ಪಿಕ್ ಹಾಗೂ ಜಂಡು ಬಾಮ್​ ಮಿಶ್ರಣ ಮಾಡಿ ಹಾಕಿದ್ದಾರೆ. ಇದರಿಂದ ದೃಷ್ಟಿ ಇನ್ನಷ್ಟು ಮಂಜಾದ ಪರಿಣಾಮ ಹೇಮಾವತಿ ತನ್ನ ಮಗ ಶಶಿಧರನಿಗೆ ಮಾಹಿತಿ ನೀಡಿದರು, ಶಶಿಧರ್​ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಹೇಮಾವತಿ ಅಂಧೆಯಾಗಿದ್ದರು. ಬಳಿಕ ಶಶಿಧರ್​ ತಾಯಿಯನ್ನು ಎಲ್​ವಿ ಪ್ರಸಾದ್​ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಇಲ್ಲಿ ವೈದ್ಯರು ವೃದ್ಧೆಯ ಕಣ್ಣಿಗೆ ವಿಷಕಾರಿ ವಸ್ತು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಇದಾದ ಬಳಿಕ ಭಾರ್ಗವಿ ಮೇಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ ಆಕೆಯ ವಿರುದ್ಧ ದೂರು ನೀಡಿತು. ಪೊಲೀಸ್​ ತನಿಖೆಯಲ್ಲಿ ಭಾರ್ಗವಿ ಸತ್ಯ ಬಾಯ್ಬಿಟ್ಟಿದ್ದಾಳೆ. ಆಕೆಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...