ಕೀವ್: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ರಷ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಫೈರಿಂಗ್ ನಡೆಸಿದೆ.
ಉಕ್ರೇನ್ ನ ಜಪೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ಫೈರಿಂಗ್ ಮಾಡಿದೆ. ಯುರೋಪ್ ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಇದಾಗಿದ್ದು, ಈ ಸ್ಥಾವರ ಮೇಲೆ ಎಲ್ಲ ಕಡೆಯಿಂದಲೂ ರಷ್ಯಾ ಗುಂಡು ಹಾರಿಸುತ್ತದೆ. ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಈಗಾಗಲೇ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದೆ.
ಈ ಪರಮಾಣು ವಿದ್ಯುತ್ ಸ್ಥಾವರ ಸ್ಪೋಟಗೊಂಡಲ್ಲಿ ಭಾರಿ ಅಪಾಯವೇ ಕಾದಿದೆ. ಚರ್ನೋಬಿಲ್ ಗಿಂತ 10 ಪಟ್ಟು ಹೆಚ್ಚು ಅಪಾಯ ಸಂಭವಿಸುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವರು ಹೇಳಿಕೆ ನೀಡಿದ್ದಾರೆ. ಉಕ್ರೇನ್ ನ ಚೆರ್ನಿಹಿವ್ ನಲ್ಲಿ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ 22 ಉಕ್ರೇನಿಯನ್ನರು ಉಸಿರು ನಿಲ್ಲಿಸಿದ್ದಾರೆ.