ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿ ಒಂದು ವಾರಗಳೇ ಕಳೆದಿದೆ. ರಷ್ಯಾದ ಆಕ್ರಮಣಕ್ಕೆ ಉಕ್ರೇನ್ನ ಪ್ರಮುಖ ನಗರಗಳು ಹಾನಿಗೊಳಗಾಗಿವೆ. ಆದರೂ ಧೈರ್ಯ ಕಳೆದುಕೊಳ್ಳದ ಉಕ್ರೇನ್ ರಷ್ಯಾಗೆ ತನ್ನ ಪ್ರತಿರೋಧವನ್ನೇ ಒಡ್ಡುತ್ತಿದೆ.
ಈ ಎಲ್ಲದರ ನಡುವೆ ಉಕ್ರೇನ್ ಇಂದು ತಾನು ರಷ್ಯಾದೊಂದಿಗೆ ಶಾಂತಿ ಮಾತುಕತೆಯನ್ನು ನಡೆಸುತ್ತಿರುವುದರ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದೆ.
ಈ ವಿಚಾರವಾಗಿ ಮಾಹಿತಿ ನೀಡಿದ ಉಕ್ರೇನಿಯನ್ ನಿಯೋಗದ ಸದಸ್ಯ , ಶಾಸಕ ಡೇವಿಡ್ ಅರಾಖಮಿಯಾ ಉಕ್ರೇನ್ ಕನಿಷ್ಟ ಮಾನವೀಯ ಕಾರಿಡಾರ್ನ್ನು ಒಪ್ಪಿಕೊಳ್ಳಲು ನೋಡುತ್ತಿದೆ ಎಂದು ಹೇಳಿದ್ದಾರೆ.