ಐದು ಟೆಸ್ಟ್ಗಳ ಸರಣಿಯನ್ನು ಆಡಲು ಇಂಗ್ಲೆಂಡ್ 2016ರಲ್ಲಿ ಭಾರತಕ್ಕೆ ಬಂದಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ದ್ವಿಶತಕ ಸಿಡಿಸಿದ್ದರು.
ಬಲಗೈ ಆಟಗಾರ ಜೇಮ್ಸ್ ಆಂಡರ್ಸನ್, ಕ್ರಿಸ್ ವೋಕ್ಸ್, ಜೇಕ್ ಬಾಲ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಅವರನ್ನು ದಂಡಿಸಿದ್ರು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 400 ರನ್ ಗಳಿಸಿತ್ತು. ಆದರೆ ಕೊಹ್ಲಿ ಅವರ 235 ರನ್ಗಳ ನೆರವಿನಿಂದ ಭಾರತ 631 ರನ್ ಗಳಿಸಿ ಪಂದ್ಯವನ್ನು ಇನ್ನಿಂಗ್ಸ್ನಿಂದ ಗೆದ್ದುಕೊಂಡಿತು.
254 – ಪುಣೆ 2019
2019 ರಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸವು ವಿರಾಟ್ ಕೊಹ್ಲಿಗೆ ನಿರ್ಣಾಯಕವಾಗಿತ್ತು. ಭಾರತ ಮೊದಲು ಬ್ಯಾಟಿಂಗ್ ಮಾಡಿ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕೊಹ್ಲಿ 254 ರನ್ ಸಿಡಿಸಿದ್ದರು.
ಅತ್ಯುತ್ತಮ ಐದು-ಟೆಸ್ಟ್ ದಾಖಲೆಗಳು:
ನಾಯಕನಾಗಿ ಕೊಹ್ಲಿಯು 20 ಟೆಸ್ಟ್ ಶತಕಗಳ ದಾಖಲೆಯನ್ನು ಹೊಂದಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಗ್ರೇಮ್ ಸ್ಮಿತ್ (25) ಇದ್ದಾರೆ.
ಭಾರತದ ಮಾಜಿ ನಾಯಕನ ಚೊಚ್ಚಲ 27 ಶತಕಗಳು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗೆ ಮಾತ್ರ ಸಮನಾಗಿರುತ್ತದೆ. ಡೇವಿಡ್ ವಾರ್ನರ್, ಜೋ ರೂಟ್ ಮತ್ತು ಕೇನ್ ವಿಲಿಯಮ್ಸನ್ಗಿಂತ ಹೆಚ್ಚಾಗಿದೆ.
ಕೊಹ್ಲಿ ನೇತೃತ್ವದ ಭಾರತ ತಂಡ ತವರಿನಲ್ಲಿ 24 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.
ಭಾರತದ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಗೆಲುವು ದಾಖಲೆಯನ್ನೂ ಕೊಹ್ಲಿ ಹೊಂದಿದ್ದಾರೆ. ಕೊಹ್ಲಿ ನೇತೃತ್ವದ ಭಾರತ ತಂಡ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆದ್ದಿದೆ.
ಗ್ರೆಗ್ ಚಾಪೆಲ್ ನಂತರ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಅವಳಿ ಶತಕಗಳನ್ನು ಗಳಿಸಿದ ಎರಡನೇ ಕ್ರಿಕೆಟಿಗರಾಗಿದ್ದಾರೆ.