
ಇದೊಂದು ವೈಜ್ಞಾನಿಕ ಕಾಲ್ಪನಿಕ ಕತೆಯಾಗಿದ್ದು 1970ರ ಕಾಲಘಟ್ಟದಲ್ಲಿ ಯುರೋಪ್ನಲ್ಲಿ ನಡೆಯುವ ಕತೆ ಇದಾಗಿದೆ, ಈ ಸಿನಿಮಾದಲ್ಲಿ ಭಾಗ್ಯಶ್ರೀ, ಕೃಷ್ಣಂ ರಾಜು, ಸಚಿನ್ ಖೇಡೇಕರ್ ಹಾಗೂ ಪ್ರಿಯದರ್ಶಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾವನ್ನು ಯುವಿ ಕ್ರಿಯೇಷನ್ಸ್, ಗೋಪಿ ಕೃಷ್ಣ ಮೂವೀಸ್ ಮತ್ತು ಟಿ-ಸೀರೀಸ್ ನಿರ್ಮಿಸಿದೆ.