ಫ್ಯೂಚರ್ ಗ್ರೂಪ್ ಜೊತೆಯಲ್ಲಿ ರಿಲಯನ್ಸ್ ವಿಲೀನ ಪ್ರಕ್ರಿಯೆ ಆರಂಭಿಸಿದ್ದು ಇದರಿಂದ ದೇಶದ ಪ್ರಮುಖ ರಿಟೇಲ್ ವಹಿವಾಟು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಡರ್ಗಳು, ಪೂರೈಕೆದಾರರು ಹಾಗೂ ಉದ್ಯೋಗಿಗಳಿಗೆ ಭಾರೀ ನಿರಾಳವಾಗಿದೆ. ಫ್ಯೂಚರ್ ಗ್ರೂಪ್ನಲ್ಲಿರುವ ಉದ್ಯೋಗಿಗಳಿಗೆ ರಿಲಯನ್ಸ್ ಕೆಲಸ ನೀಡಲಿದೆ. ಈ ಮೂಲಕ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದ್ದ 30 ಸಾವಿರ ಉದ್ಯೋಗಳಿಗೆ ಇದರಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕೇವಲ ಉದ್ಯೋಗಿಗಳು ಮಾತ್ರವಲ್ಲದೇ ಫ್ಯೂಚರ್ ಗ್ರೂಪ್ನಲ್ಲಿದ್ದ ವೆಂಡರ್ಗಳು ಹಾಗೂ ಪೂರೈಕೆದಾರರಿಗೂ ದೊಡ್ಡ ಕಾರ್ಪೋರೇಟ್ ಸಂಸ್ಥೆಯೊಂದು ನೆರವಿಗೆ ಬಂದಿರುವುದು ತಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರದ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಇನ್ನು ಫ್ಯೂಚರ್ ಗ್ರೂಪ್ ಕಳೆದ ವರ್ಷದಿಂದ ಸ್ಟೋರ್ನ ಮಾಲೀಕರಿಗೆ ಬಾಡಿಗೆಯನ್ನು ನೀಡಿರಲಿಲ್ಲ. ಮುಂದಿನ ದಿನಗಳಲ್ಲಿ ಫ್ಯೂಚರ್ ಗ್ರೂಪ್ ಈ ಬಾಕಿ ಮೊತ್ತ ಪಾವತಿಸಬಹುದು ಎಂಬ ನಂಬಿಕೆ ಕೂಡ ಮಾಲೀಕರಿಗೆ ಇರಲಿಲ್ಲ. ಆದರೆ ರಿಲಯನ್ಸ್ ಜೊತೆ ಒಪ್ಪಂದದ ಬಳಿಕ ಇವರಿಗೂ ಬಾಕಿ ಮೊತ್ತ ಪಾವತಿಯಾಗಿದ್ದು ಸ್ಟೋರ್ ಮಾಲೀಕರು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.