ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ.
46 ವರ್ಷ ಒಲೆನಾ ಎಂಬಾಕೆ ಮೂರು ತಿಂಗಳ ಹಿಂದಷ್ಟೇ ಬ್ರಿಟನ್ ಪ್ರಜೆ ಜೋನಾಥನ್ ಜೊತೆ ಮದುವೆಯಾಗಿತ್ತು. ಆಕೆ ಪತಿಯೊಂದಿಗೆ ಇರಲು ಉತ್ಸುಕಳಾಗಿದ್ದಳು, ಯುಕೆಗೆ ತೆರಳಲು ಅಗತ್ಯವಿರುವ ಎಲ್ಲಾ ಪರೀಕ್ಷೆ ಪೂರ್ಣಗೊಳಿಸಿದ್ದಳು. ಅರ್ಜಿಯನ್ನು ಮಂಜೂರು ಮಾಡಲು ಅಗತ್ಯವಿರುವ ಕೊನೆ ಹಂತದ ಹದಿನೈದು ನಿಮಿಷದ ಇಂಗ್ಲಿಷ್ ಪರೀಕ್ಷೆಯನ್ನು ಯುದ್ಧದ ಕಾರಣಕ್ಕೆ ಮುಂದೂಡಲಾಯಿತು.
ಇದು ಉಕ್ರೇನಿಯನ್ ಮಹಿಳೆಯ ಪಾಲಿಗಂತೂ ಹೃದಯವಿದ್ರಾವಕ. ಆಕೆಯ ವೀಸಾ ಅರ್ಜಿ ಪ್ರಕ್ರಿಯೆಯು ಸ್ಥಗಿತಗೊಂಡಿದೆ. ಆಕೆಯ ಪತಿ, ಜೊನಾಥನ್ ಬ್ರಿಟನ್‌ಗೆ ಮರಳಬೇಕಾಯಿತು, ಆಕೆಯನ್ನು ಉಕ್ರೇನ್‌ನಲ್ಲಿ ಬಿಟ್ಟುಹೋಗಬೇಕಾಯಿತು.
ಆಕೆ ಸುರಕ್ಷತೆಗಾಗಿ ಇತರ ನಾಗರಿಕರೊಂದಿಗೆ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ ಕಳೆದರು ಮತ್ತು ಈಗಲೂ ಅಲ್ಲೇ ಇದ್ದಾರೆ. ಆಕೆ ಮನೆ ಬಳಿ ಹತ್ತಿರ ಸ್ಫೋಟಗಳು ನಡೆದಿವೆಯಂತೆ.