ಬೆಚ್ಚಿಬೀಳಿಸುತ್ತೆ ಕೇವಲ 4 ದಿನಗಳಲ್ಲಿ ಉಕ್ರೇನ್ನಿಂದ ಪಲಾಯನ ಮಾಡಿದವರ ಸಂಖ್ಯೆ..! 28-02-2022 8:08PM IST / No Comments / Posted In: Latest News, Live News, International ಉಕ್ರೇನ್ನ ಮೇಲೆ ರಷ್ಯಾವು ಮಿಲಿಟರಿ ಕಾರ್ಯಾಚರಣೆಯು ಕೈಗೊಂಡ ಬಳಿಕ ಯುದ್ಧ ಪೀಡಿತ ಉಕ್ರೇನ್ನಿಂದ ಈವರೆಗೆ 5,00,000ಕ್ಕೂ ಅಧಿಕ ಮಂದಿ ಉಕ್ರೇನ್ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು ಅಧಿಕೃತ ಮಾಹಿತಿಯನ್ನು ನೀಡಿದೆ. ವಿಶ್ವಸಂಸ್ಥೆಯ ಹೈ ಕಮಿಷನರ್ ಫಿಲಿಪ್ಪೋ ಗ್ರ್ಯಾಂಡಿ ಈ ವಿಚಾರವಾಗಿ ಟ್ವೀಟ್ ಮಾಡಿ ಅಂದಾಜು ಮಾಹಿತಿ ನೀಡಿದ್ದಾರೆ. ಈ ಸಂಖ್ಯೆಯು ಶೀಘ್ರದಲ್ಲಿಯೇ ಇನ್ನಷ್ಟು ಏರಿಕೆ ಕಾಣಲಿದೆ ಎಂದೂ ಅವರು ಅಂದಾಜಿಸಿದ್ದಾರೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಪೊಲೆಂಡ್ಗೆ 2,81,000, ಹಂಗೇರಿಗೆ 84.500ಕ್ಕೂ ಅಧಿಕ ಮಂದಿ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಮಾಲ್ಡೋವಾಗೆ ಸುಮಾರು 36,400, ರೋಮೆನಿಯಾಗೆ 32,500 ಹಾಗೂ ಸ್ಲೋವೆಕಿಯಾಗೆ 30 ಸಾವಿರ ಜನರು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಇನ್ನುಳಿದವರು ಇನ್ನೂ ಅಂದಾಜಿಸಲು ಸಾಧ್ಯವಾಗದಂತೆ ವಿವಿಧ ದೇಶಗಳಿಗೆ ಚದುರಿ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ. ಉಕ್ರೇನ್ನ ನಿರಾಶ್ರಿತರಿಗೆ ಗಡಿ ಭಾಗದ ದೇಶಗಳಾದ ಪೋಲೆಂಡ್, ಹಂಗೇರಿ, ಬಲ್ಗೇರಿಯಾ, ಮೊಲ್ಡೊವಾ ಮತ್ತು ರೊಮೇನಿಯಾದ ನಾಯಕರು ಸ್ವಾಗತಿಸುತ್ತಿದ್ದಾರೆ. ರಷ್ಯಾವು ಉಕ್ರೇನ್ನ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುತ್ತಾ ಇರೋದ್ರಿಂದ ನಾಗರಿಕರ ವಾಸ ಕಷ್ಟಕರವಾಗಿದೆ. More than 500,000 refugees have now fled from Ukraine into neighbouring countries. — Filippo Grandi (@FilippoGrandi) February 28, 2022