ವನ್ಯಜೀವಿ ಛಾಯಾಗ್ರಾಹಕರು ಸೆರೆಹಿಡಿದಿರುವ ಅದ್ಭುತ ಚಿತ್ರ ಇದು. ನಿಮ್ಮನ್ನು ಆಶ್ಚರ್ಯಚಕಿತಗೊಳಿಸುವುದರ ಜೊತೆಗೆ ನಿಮ್ಮ ಬುದ್ಧಿಮತ್ತೆಗೂ ಕೆಲಸ ಕೊಡುವಂತಹ ಫೋಟೋ. ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕುವ ಸವಾಲು ನಿಮ್ಮ ಮುಂದಿದೆ.
ಛಾಯಾಗ್ರಾಹಕ ಸೌರಭ್ ದೇಸಾಯಿ ಹಿಮ ಚಿರತೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಿಮಚಿರತೆ ಎಲ್ಲಿನ ಅಡಗಿದೆ ಅನ್ನೋದನ್ನು ನೀವು ಪತ್ತೆ ಮಾಡಬೇಕು.
ಕಲ್ಲು ಬಂಡಗಳ ಮಧ್ಯೆ ಹಿಮಚಿರತೆ ಎಲ್ಲಿದೆ ಅನ್ನೋದನ್ನು ಹಲವರು ಈಗಾಗ್ಲೇ ಕಂಡುಹಿಡಿದಿರಬಹುದು. ನೀವು ಕೂಡ ಒಮ್ಮೆ ಪ್ರಯತ್ನಿಸಿ.
ಅಂದ್ಹಾಗೆ ಸೌರಭ್ ದೇಸಾಯಿ ಅವರ ಈ ಪೋಸ್ಟ್ ಅನ್ನು ಹಲವರು ಶೇರ್ ಮಾಡಿದ್ದಾರೆ. ಸಾಕಷ್ಟು ಕಮೆಂಟ್ ಗಳು ಕೂಡ ಬಂದಿವೆ. ಕೆಲವರು ಹಿಮಚಿರತೆಯನ್ನು ಗುರುತಿಸಲು ಯಶಸ್ವಿಯಾದ್ರೆ ಇನ್ನು ಕೆಲವರು ವಿಫಲರಾಗಿದ್ದಾರೆ. ಅದೇನೇ ಆದ್ರೂ ಇದೊಂಥರಾ ಫನ್ನಿ ಗೇಮ್ ಅನ್ನೋದ್ರಲ್ಲಿ ಸಂಶಯವಿಲ್ಲ.

