ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ಮೇಲೆ ಯುದ್ಧವನ್ನು ಘೋಷಿಸುತ್ತಿದ್ದಂತೆಯೇ ಉಕ್ರೇನ್ನಲ್ಲಿ ಕಂಡ ಕಂಡಲ್ಲಿ ಕ್ಷಿಪಣಿಯ ದಾಳಿಗಳು ನಡೆಯುತ್ತಿದೆ. ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ರಷ್ಯಾದ ಸೈನಿಕರು ಬೇರೇನೋ ಹುಡುಕಾಟದಲ್ಲಿ ಇರುವಂತೆ ಕಾಣುತ್ತಿದೆ.
ಹೌದು..! ಉಕ್ರೇನ್ನ ಗಡಿಗಳಲ್ಲಿ ನಿಯೋಜನೆಗೊಂಡಿರುವ ರಷ್ಯಾದ ಸೈನಿಕರು ಉಕ್ರೇನ್ನ ಖಾರ್ಕಿವ್ ನಗರದಲ್ಲಿರುವ ಮಹಿಳೆಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರಂತೆ..! ರೆಡ್ ಆರ್ಮಿಯ ಕಮಾಂಡರ್ಗಳು ತಮ್ಮ ಶತ್ರುಗಳನ್ನು ಓಲೈಸಲು ಸಮವಸ್ತ್ರದಲ್ಲಿರುವ ತಮ್ಮ ಫೋಟೋ ಹಾಗೂ ತಾವಿರುವ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರಂತೆ.
ಖಾರ್ಕಿವ್ನಲ್ಲಿ ವಾಸವಿರುವ ಉಕ್ರೇನ್ ಮಹಿಳೆಯರು ಟಿಂಡರ್ ಆ್ಯಪ್ನಲ್ಲಿ ಡಜನ್ಗಟ್ಟಲೇ ರಷ್ಯಾದ ಸೈನಿಕರನ್ನು ಗುರುತಿಸಿದ್ದಾರೆ. ಇದೇ ಸಮಯದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ. ಖಾರ್ಕಿವ್ ಪುಟಿನ್ರ ಸೈನ್ಯ ನೆಲೆಸಿರುವ ಸ್ಥಳದಿಂದ ಕೇವಲ 20 ಮೈಲಿ ದೂರದಲ್ಲಿದೆ. ಸತ್ಯವನ್ನು ಪರಿಶೀಲನೆ ಮಾಡಲು ಉಕ್ರೇನ್ನಲ್ಲಿರುವ ಸಾಕಷ್ಟು ಮಹಿಳೆಯರು ತಾವಿರುವ ಸ್ಥಳವನ್ನು ಖಾರ್ಕಿವ್ ಎಂದು ಆ್ಯಪ್ನಲ್ಲಿ ಅಪ್ಡೇಟ್ ಮಾಡಿದಾಗ ರಷ್ಯಾದ ಸೈನಿಕರು ಲವ್ಗಾಗಿ ಹುಡುಕಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಉಕ್ರೇನ್ ವಿಡಿಯೋ ಪ್ರೊಡ್ಯೂಸರ್ ದಶಾ ಸಿನೆಲ್ನಿಕೋವಾ ನಾನು ಅಸಲಿಗೆ ಕೈವ್ನಲ್ಲಿ ವಾಸವಿದ್ದೇನೆ. ಆದರೆ ಟಿಂಡರ್ನಲ್ಲಿ ರಷ್ಯಾದ ಸೈನಿಕರು ಲವ್ಗಾಗಿ ಹುಡುಕುತ್ತಿರುವುದು ಗಮನಕ್ಕೆ ಬಂದ ಬಳಿಕ ನನ್ನ ಲೊಕೇಷನ್ನ್ನು ಖಾರ್ಕಿವ್ಗೆ ಬದಲಾಯಿಸಿದೆ. ಆಗ ನನಗೆ ರಷ್ಯಾದ ಸೈನಿಕರು ಪ್ರೀತಿಗಾಗಿ ಹುಡುಕಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಓರ್ವ ಯೋಧನಂತೂ ಕೈಯಲ್ಲಿ ಪಿಸ್ತೂಲ್ ಹಿಡಿದು ಹಾಸಿಗೆಯಲ್ಲಿ ಮಲಗಿಕೊಂಡಿರುವ ಮಾದಕ ಫೋಟೋವೊಂದನ್ನು ಟಿಂಡರ್ನಲ್ಲಿ ಶೇರ್ ಮಾಡಿದ್ದಾನೆ. ಇನ್ನು ಹಲವು ಯೋಧರು ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಆದರೆ ನನಗೆ ಇವ್ಯರ್ಯಾರೂ ಆಕರ್ಷಕ ಎಂದು ಎನಿಸಲೇ ಇಲ್ಲ. ನಮ್ಮ ಶತ್ರುವಿನ ಜೊತೆಯಲ್ಲಿ ನಾವು ಮಲಗುವ ಮಾತೇ ಇಲ್ಲ. ನಾನು ಟಿಂಡರ್ ಅಪ್ಲಿಕೇಶನ್ನಲ್ಲಿ ರಷ್ಯಾದ ಸೈನಿಕರನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ದಶಾ ಹೇಳಿದ್ದಾರೆ.