alex Certify ಋತುಬಂಧದಲ್ಲಿರಬೇಕು ಎಂದು ಮಹಿಳೆಗೆ ಅವಮಾನ ಮಾಡಿದ ಬಾಸ್: 20 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿದ ಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಋತುಬಂಧದಲ್ಲಿರಬೇಕು ಎಂದು ಮಹಿಳೆಗೆ ಅವಮಾನ ಮಾಡಿದ ಬಾಸ್: 20 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿದ ಕೋರ್ಟ್

ಋತುಬಂಧದಲ್ಲಿರಲೇಬೇಕು ಎಂದು ಬಾಸ್ ಜೋರಾಗಿ ಕೂಗಿದ ನಂತರ ಯುಕೆ ಮೂಲದ ಮಹಿಳೆಗೆ 20 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.

ವರದಿಯ ಪ್ರಕಾರ, 52 ವರ್ಷದ ಲೇಘ್ ಬೆಸ್ಟ್ ಎಂಬಾಕೆ ಯುಕೆಯ ಎಸ್ಸೆಕ್ಸ್‌ನ ಪಿಇಟಿ ಆಹಾರ ಸಂಸ್ಥೆಯಾದ ಎಂಬಾರ್ಕ್ ಆನ್ ರಾದಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 2020 ರಲ್ಲಿ ಒಂದು ದಿನ ಕಂಪನಿಯಲ್ಲಿ ಮಾರಾಟ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬೆಸ್ಟ್, ತನ್ನ ಬಾಸ್ ಡೇವಿಡ್ ಫ್ಲೆಚರ್ ಅವರೊಂದಿಗೆ ಜಗಳವಾಡಿದ್ದಾರೆ.

ಕೆಲಸದ ಸ್ಥಳದಲ್ಲಿ ಋತುಬಂಧವನ್ನು ಹೊಂದಿರಬೇಕು ಎಂದು ಬಾಸ್ ಆದೇಶಿಸಿದ ನಂತರ ಇದು ವಾಗ್ವಾದಕ್ಕೆ ಕಾರಣವಾಗಿತ್ತು.  ಗ್ರಾಹಕರು ಡೇವಿಡ್ ಮತ್ತೆ ಬೆಸ್ಟ್ ಅನ್ನು ಕೆಲಸದಲ್ಲಿ ಅವಮಾನಿಸಲು ಪ್ರಯತ್ನಿಸಿದ್ದಾರೆ. ಬೆಸ್ಟ್‌ಗೆ ತಾನು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅಹಿತಕರ ಕೆಲಸದ ವಾತಾವರಣ ಸೃಷ್ಟಿಯಾಯ್ತು. ಘಟನೆಯ ನಂತರ, ಬೆಸ್ಟ್, ಡೇವಿಡ್ ಅವರ ಹೆಂಡತಿಗೆ ದೂರು ನೀಡಲು ಪ್ರಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

ಡೇವಿಡ್‌ನ ಹೆಂಡತಿ ಆಂಡ್ರಿಯಾ, ಡೇವಿಡ್‌ನ ವರ್ತನೆಗೆ ಕ್ಷಮೆ ಕೋರಿದ್ದಾಳೆ. ಆದರೆ, ಬೆಸ್ಟ್‌ಳನ್ನು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದಳಂತೆ. ಸಾಂಕ್ರಾಮಿಕ ಸಮಯದಲ್ಲಿ, ಬೆಸ್ಟ್ ಒಮ್ಮೆ ತನ್ನ ಬಾಸ್‌ನೊಂದಿಗೆ ಸುರಕ್ಷತೆಯ ಕಾಳಜಿಯ ಬಗ್ಗೆ ಮಾತನಾಡಿದ್ದಾರೆ. ಆದರೆ, ಬೆಸ್ಟ್ ಗೆ ಮತಿಭ್ರಮಣೆಯಾಗಿದೆ ಎಂದು ಜರೆಯಲಾಯಿತು. ನಂತರ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರೊಂದಿಗೆ ಅಸಭ್ಯ ವರ್ತನೆಗಾಗಿ ಕೆಲಸದಿಂದ ವಜಾಗೊಳಿಸಲಾಯಿತು.

ಡೇವಿಡ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಬೆಸ್ಟ್ ದೋಷಾರೋಪಣೆ ಸಲ್ಲಿಸಿದ್ದರು. ಡೇವಿಡ್ ನ ಋತುಬಂಧದ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಮಂಡಳಿಯು 20.2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಇದೀಗ ಲೀ ಬೆಸ್ಟ್ ರಾಕಿಂಗ್ಸ್ ಎಂಬ ಹೆಸರಿನಲ್ಲಿ ತನ್ನದೇ ಆದ ಕಂಪನಿಯನ್ನು ಸ್ಥಾಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...